Shreyas Iyer : ತಂಡದ ಆಯ್ಕೆ ಬಗ್ಗೆ ಈಗ ಕ್ಲಾರಿಟಿ ಸಿಕ್ಕಿದೆ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೇಯಸ್ಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡ 52 ರನ್ ಗಳ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಈ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಶರ್ಮಾ ಬಳಕ 17.3 ಓವರ್ ಗಳಲ್ಲಿ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯ್ತು.
ಇದರೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಡ್ ತಂಡ ಮುಂಬೈ ವಿರುದ್ದ 52 ರನ್ ಗಳ ಗೆಲುವು ಕಂಡಿದೆ.
ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಕಿಲಕ ಸಮಯದಲ್ಲಿ ಜಯ ಸಾಧಿಸಿದ್ದು ಸ್ವಲ್ಪ ನೆಮ್ಮದಿ ತಂದಿದೆ.
ಸತತ ಐದು ಸೋಲುಗಳಿಂದ ನಾವು ಕುಗ್ಗಿ ಹೋಗಿದ್ದೇವು. ಪ್ಲೇಯಿಂಗ್ 11 ಆಯ್ಕೆ ಮಾಡೋದು ತುಂಬಾ ದೊಡ್ಡ ಸವಾಲಾಗಿತ್ತು.

ಈ ಪಂದ್ಯದಲ್ಲಿ ನೀವು ಆಡುತ್ತಿಲ್ಲ ಎಂದು ಆಟಗಾರರಿಗೆ ಸ್ವತಃ ಹೇಳೋದು ತುಂಬಾ ನೋವಾಗುತ್ತಿತ್ತು.
ಕೆಲವು ಸಂದರ್ಭದಲ್ಲಿ ತಂಡ ನೇಮಕದಲ್ಲಿ ತಂಡದ ಸಿಎಓ ವೆಂಕಿ ಮೈಸೂರ್ ಭಾಗಿಯಾಗಿದ್ದರು.
ತಂಡದ ಆಯ್ಕೆಯಲ್ಲಿ ಅವರು ಕೊಟ್ಟ ಸಲಹೆಗಳು ನನಗೆ ಉಪಯುಕ್ತವಾಗಿದೆ ಎಂದಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದು ಮತ್ತೊಮ್ಮೆ ಜಯಭೇರಿ ಬಾರಿಸಿದ್ದೇವೆ.
ಇದೀಗ ತಂಡದ ಸಂಯೋಜನೆ ಬಗ್ಗೆ ದು ಕ್ಲಾರಿಟಿ ಸಿಕ್ಕಿದೆ. ಹೆಚ್ಚಿನ ಬದಲಾವಣೆಗಳು ಇಲ್ಲದಿರಬಹುದು.
ಲಕ್ನೋ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾವು ಭಾರಿ ಅಂತರದಿಂದ ಸೋತಿದ್ದೆವು. ಅದನ್ನ ಸರಿಪಡಿಸಿಕೊಳ್ಳಲು ನಾವು ಮುಂಬೈ ವಿರುದ್ಧ ದೊಡ್ಡ ಗೆಲುವು ಸಾಧಿಸಲು ಪ್ಲಾನ್ ಮಾಡಿಕೊಂಡಿದ್ವಿ,. ಅದರಂತೆ ನಾವು ಜಯ ಸಾಧಿಸಿದ್ದೇವೆ ಎಂದಿದ್ದಾರೆ. shreyas-iyer-big-statement-ceo-involved-team-selection








