3 ಹುಲಿಮರಿಗಳಿಗೆ ಜನ್ಮ ನೀಡಿದ ಮೈಸೂರು ಮೃಗಾಲಯದ ಬಿಳಿ ಹುಲಿ…
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಬಿಳಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. 8 ವರ್ಷದ ಹೆಣ್ಣು ಹುಲಿ ತಾರಾ ಏಪ್ರಿಲ್ 26 ರಂದು ಮೂರು ಮಕ್ಕಳಿಗೆ ಜನ್ಮ ನೀಡಿದೆ.
ಹುಲಿಯ ಮರಿಗಳ ಚಲನವಲನ ಹಾಗೂ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಇವು ಆರೋಗ್ಯವಾಗಿರುವ ಕಾರಣ ಇದೀಗ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಮೈಸೂರು ಮೃಗಾಲಯದಲ್ಲಿ 9 ಗಂಡು ಹುಲಿಗಳು ಮತ್ತು 7 ಹೆಣ್ಣು ಹುಲಿಗಳಿವೆ. ಇದೀಗ ಮೂರು ಹುಲಿ ಮರಿಗಳ ಜನನವಾಗಿದೆ.
Mysore Zoo’s white tiger that gave birth to 3 tigers…