ಅಂತಿಮವಾಗಿ ಐಪಾಡ್ ಉತ್ಪಾದನೆ ಸ್ಥಗಿತಗೊಳಿಸಿದ ಆಪಲ್ ಕಂಪನಿ…
ಒಂದು ಕಾಲದಲ್ಲಿ ಸಂಗೀತ ಪ್ರಿಯರ ನಂಬರ್ ಒನ್ ಆಯ್ಕೆ ಹಾಗೂ ಸ್ಟೇಟಸ್ ಸಿಂಬಲ್ ಆಗಿದ್ದ ಐಪಾಡ್ ಗಳ ತಯಾರಿಕೆಯನ್ನ ಆ್ಯಪಲ್ ನಿಲ್ಲಿಸಲಿದೆ. ಈ ವಿಷಯವನ್ನು ಟೆಕ್ ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ.
ಪ್ರಸ್ತುತ ಸರಕು ಲಭ್ಯವಿರುವವರೆಗೆ ನೀವು ಅದನ್ನು ಆಪಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದು. ಐಪಾಡ್ ಅನ್ನು 21 ವರ್ಷಗಳ ಹಿಂದೆ 23 ಅಕ್ಟೋಬರ್ 2001 ರಂದು ಪ್ರಾರಂಭಿಸಲಾಗಿತ್ತು. 1,000 ಹಾಡುಗಳು ಮತ್ತು 10-ಗಂಟೆಗಳ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವಿರುವ ಮೊದಲ MP3 ಪ್ಲೇಯರ್ ಇದಾಗಿತ್ತು.
“ಸಂಗೀತ ಯಾವಾಗಲೂ ಆಪಲ್‌ನಲ್ಲಿ ಪ್ರಮುಖ ಭಾಗವಾಗಿದೆ, ಐಪಾಡ್ ಅದನ್ನ ಲಕ್ಷಾಂತರ ಜನರಿಗೆ ತಲುಪಿಸಿದ ವಿಧಾನ ಸಂಗೀತ ಉದ್ಯಮದ ಪ್ರಭಾವಕ್ಕಿಂತ ಹೆಚ್ಚು” ಎಂದು ಆಪಲ್‌ನ ವರ್ಲ್ಡ್‌ವೈಡ್ ಮಾರ್ಕೆಟಿಂಗ್‌ನ ಹಿರಿಯ ಉಪಾಧ್ಯಕ್ಷ ಗ್ರೆಗ್ ಜೋಸ್ವಿಯಾಕ್ ಹೇಳಿದ್ದಾರೆ.
ಆಪಲ್ ವರ್ಷಗಳಿಂದ ಐಪಾಡ್ ನ ಡಜನ್ಗಟ್ಟಲೆ ಆವೃತ್ತಿಗಳನ್ನ ಬಿಡುಗಡೆ ಮಾಡಿದೆ, ಆದರೆ ಐಫೋನ್ ಮತ್ತು ಇತರ ಉತ್ಪನ್ನಗಳು ಆಪಲ್ ಮ್ಯೂಸಿಕ್ ಗೆ ಮಾತ್ರ ಬೆಂಬಲಿಸುತ್ತಿದ್ದವು. ಇದರಿಂದಾಗಿ ಜನಪ್ರಿಯತೆ ಕ್ಷೀಣಿಸಿದೆ. ಈ ಕಾರಣಕ್ಕಾಗಿ ಆಪಲ್ ಕಂಪನಿಯು 2014 ರಿಂದ ಐಪಾಡ್ ಮಾದರಿಗಳನ್ನು ನಿಲ್ಲಿಸಲು ಪ್ರಾರಂಭಿಸಿದೆ. 2014 ರಲ್ಲಿ ಐಪಾಡ್ ಕ್ಲಾಸಿಕ್ , 2017 ರಲ್ಲಿ, ಐಪಾಡ್ ನ್ಯಾನೋ ಮತ್ತು ಐಪಾಡ್ ಷಫಲ್ ಗಳ ಉತ್ಪಾದನೆಯನ್ನ ನಿಲ್ಲಿಸಿತ್ತು.
ಆಪಲ್ CEO ಸ್ಟೀವ್ ಜಾಬ್ಸ್ ಜನವರಿ 6, 2004 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಮ್ಯಾಕ್‌ವರ್ಲ್ಡ್ ಕಾನ್ಫರೆನ್ಸ್ ಮತ್ತು ಎಕ್ಸ್‌ಪೋದಲ್ಲಿ ಐಪಾಡ್ ಮಿನಿಯನ್ನ ಪರಿಚಯಿಸಿದ್ದರು.
ಟಚ್-ಸ್ಕ್ರೀನ್ ಮಾದರಿಯನ್ನು 2007 ರಲ್ಲಿ ಪ್ರಾರಂಭಿಸಲಾಯಿತು
ಐಪಾಡ್ ನ ಮತ್ತೊಂದು ಮಾಡಲ್ ಐಪಾಡ್ ಟಚ್, ಇದು ಟಚ್-ಸ್ಕ್ರೀನ್ ಮಾಡಲ್ ಆಗಿದ್ದು, 2007 ರಲ್ಲಿ ಬಿಡುಗಡೆಯಾಯಿತು. ಇದನ್ನು ಕೊನೆಯದಾಗಿ 2019 ರಲ್ಲಿ ಅಪ್ಡೇಟ್ ಮಾಡಲಾಗಿತ್ತು. ಇದರ ಬೆಲೆ $ 199, ಅಂದರೆ ಸುಮಾರು 15,400 ರೂಪಾಯಿಗಳು. ಈ ಮಾಡೆಲ್ ಅಂಗಡಿಯಲ್ಲಿ ಲಭ್ಯವಾಗುವವರೆಗೆ ಮಾತ್ರ ಖರೀದಿಸಬಹುದು…








