ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Doordarshan | ಪೃಥ್ವಿ ಅಂಬಾರ್ ನಟನೆಯ ‘ದೂರದರ್ಶನ’ ಸಿನಿಮಾದ ಶೂಟಿಂಗ್ ಕಂಪ್ಲೀಟ್

Mahesh M Dhandu by Mahesh M Dhandu
May 14, 2022
in Cinema, Newsbeat, ಮನರಂಜನೆ
Doordarshan film shooting complete saaksha tv

Doordarshan film shooting complete saaksha tv

Share on FacebookShare on TwitterShare on WhatsappShare on Telegram

Doordarshan | ಪೃಥ್ವಿ ಅಂಬಾರ್ ನಟನೆಯ ‘ದೂರದರ್ಶನ’ ಸಿನಿಮಾದ ಶೂಟಿಂಗ್ ಕಂಪ್ಲೀಟ್

ದೂರದರ್ಶನ.. ಈ ಹೆಸ್ರು ಕೇಳಿದ ತಕ್ಷಣ ದೃಶ್ಯಗಳನ್ನು ಹಾಗೂ ಧ್ವನಿಯನ್ನು ಜಂಟಿಯಾಗಿ ಪ್ರಸಾರ ಮಾಡುವ ಮಾಯಾಪೆಟ್ಟಿಗೆ ಎಲ್ಲರಿಗೂ ನೆನಪಾಗುತ್ತದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ಮಾಡುವ ಕಥಾಹಂದರ ಇರುವ ಸಿನಿಮಾ ತಯಾರಾಗಿದೆ ಅದುವೇ ದೂರದರ್ಶನ. ಆಕರ್ಷಕ ಶೀರ್ಷಿಕೆಯಡಿ ತಯಾರಾಗಿರುವ ಈ ಸಿನಿಮಾ 80ರ ದಶಕಕ್ಕೆ ನೋಡುಗರನ್ನು ಕರೆದೊಯ್ಯುವಂತೆ ಮಾಡುತ್ತದೆ ಎನ್ನುವುದು ಚಿತ್ರತಂಡದ‌ ಮಾತು.

Related posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

August 24, 2026
ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

August 23, 2026

ದಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಮನೆ ಮನ ಗೆದ್ದಿರುವ ಮಂಗಳೂರಿನ ಪ್ರತಿಭೆ ಪೃಥ್ವಿ ಅಂಬರ್ ದೂರದರ್ಶನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ. ಟ್ರಂಕ್ ಸಿನಿಮಾದಲ್ಲಿ ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ.

Doordarshan film shooting complete saaksha tv
Doordarshan film shooting complete saaksha tv

ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ. ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ಸೀನ್ಸ್ ಗಳಿದ್ದು, ಹೊಡೆದಾಟದ ದೃಶ್ಯಗಳನ್ನು ನೈಜ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಶೀರ್ಘದಲ್ಲಿಯೇ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. Doordarshan film shooting complete

Tags: #Saaksha TVdoordarshanDoordarshan film
ShareTweetSendShare
Join us on:

Related Posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

by admin
August 24, 2026
0

ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ...

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

by Shwetha
August 23, 2026
0

ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಈಗ ಬಾಲಿವುಡ್ ಮತ್ತು ರಾಜಕೀಯ...

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

by Shwetha
August 23, 2026
0

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇ20 (ಶೇ. 20ರಷ್ಟು ಎಥೆನಾಲ್ ಮಿಶ್ರಿತ ಇಂಧನ) ನೀತಿಯು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗಿದೆ ಎಂದು ಕಾಂಗ್ರೆಸ್...

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

by Shwetha
August 23, 2026
0

ಬೆಂಗಳೂರು: ನೈಸ್ ರಸ್ತೆಯ ಅಕ್ರಮ ಟೋಲ್ ವಸೂಲಾತಿ ವಿರುದ್ಧ ಸಮರ ಸಾರಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಎಫ್‌ಐಆರ್ ದಾಖಲಾದರೂ...

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

by Shwetha
August 23, 2026
0

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾವಣೆ ಮಾಡಿ ರೈಲ್ವೆ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ತೀವ್ರ ಆಕ್ಷೇಪ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram