ಭಾರತ – ನೇಪಾಳ ಸ್ನೇಹ ಇಡೀ ಮಾನವ ಕುಲಕ್ಕೆ ಪ್ರಯೋಜನಾಕಾರಿ – ಮೋದಿ
ಇಂದಿನ ಜಾಗತಿಕ ಪರಿಸ್ಥಿತಿಯ ನಡುವೆ ಭಾರತ ಮತ್ತು ನೇಪಾಳ ನಡುವಿನ ಸ್ನೇಹ ಮತ್ತು ನಿಕಟತೆಯು ಇಡೀ ಮಾನವಕುಲದ ಪ್ರಯೋಜನಕ್ಕಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ನೇಪಾಳದ ಲುಂಬಿನಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ-ನೇಪಾಳ ಸಂಬಂಧವು ಬುದ್ಧನ ಸಿದ್ಧಾಂತಗಳೊಂದಿಗೆ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
ನೇಪಾಳದಲ್ಲಿ ಲುಂಬಿನಿ ಮ್ಯೂಸಿಯಂ ನಿರ್ಮಾಣವು ಭಾರತ-ನೇಪಾಳ ಸಹಕಾರಕ್ಕೆ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. ಇಂದು, ಎರಡೂ ದೇಶಗಳು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನಕ್ಕಾಗಿ ಡಾ. ಅಂಬೇಡ್ಕರ್ ಪೀಠವನ್ನು ಸ್ಥಾಪಿಸಲು ನಿರ್ಧರಿಸಿವೆ.
ಬುದ್ಧ ಮಾನವೀಯತೆಯ ಸಾಂಘಿಕ ತಿಳುವಳಿಕೆಯ ಸಾಕಾರಮೂರ್ತಿ ಎಂದರು. ಬುದ್ಧನ ಬೋಧನೆಗಳನ್ನು ಜಗತ್ತಿಗೆ ಕೊಂಡೊಯ್ಯುವಲ್ಲಿ ಭಾರತ ಮತ್ತು ನೇಪಾಳದ ಯುವಕರು ಪಾತ್ರ ವಹಿಸುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.








