RR vs CSK Match | ಸೂಪರ್ ಕಿಂಗ್ಸ್ ಗೆ ರಾಯಲ್ಸ್ ಸವಾಲು
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 68ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈನ ಬ್ರೆಬೊರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಹೀಗಾಗಲೇ ಪ್ಲೇ ಆಫ್ಸ್ ಎಂಟ್ರಿ ಪಡೆದಿರುವ ರಾಜಸ್ಥಾನ್ ತಂಡ ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಸ್ ಅಧಿಕೃತಪಡಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯಲ್ಲಿ ಪಂದ್ಯದಲ್ಲಿ ಗೆದ್ದು ಗೆಲುವಿನೊಂದಿಗೆ ಟೂರ್ನಿಯ ಅಭಿಯಾನ ಮುಗಿಸುವ ಪ್ಲಾನ್ ಮಾಡಿಕೊಂಡಿದೆ.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಈ ಸೀಸನ್ ನಲ್ಲಿ 13 ಪಂದ್ಯಗಳನ್ನಾಡಿ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ರಾಯಲ್ಸ್ ತಂಡ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇತ್ತ ಧೋನಿ ನಾಯಕತ್ವ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ.
ಕಳೆದ ಪಂದ್ಯಗಳ ರಿಸಲ್ಟ್ ಬಗ್ಗೆ ಮಾತನಾಡೋದಾದ್ರೆ.. ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡ 24 ರನ್ ಗಳಿಂದ ಜಯ ಸಾಧಿಸಿದ್ದು, ಯಶಸ್ವಿ ಜೈಸ್ವಾಲ್ 41 ರನ್ ಮತ್ತು ದೇವದತ್ ಪಡಿಕ್ಕಲ್ 39 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮತ್ತೊಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಿತ್ತು. ಇದರಲ್ಲಿ ಚೆನ್ನೈ ತಂಡ ಏಳು ವಿಕೆಟ್ ಗಳಿಂದ ಸೋಲು ಕಂಡಿದೆ. ಆದ್ರೂ ಈ ಪಂದ್ಯದಲ್ಲಿ ಜಗದೀಶನ್ 39 ರನ್, ರುತುರಾಜ್ ಗಾಯಕ್ವಾಡ್ 53 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ತಂಡ ಸಾಲಿಡ್ ಆಗಿದೆ. ಬ್ಯಾಟಿಂಗ್ ನಲ್ಲಿ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಕೊಡುತ್ತಿದ್ದಾರೆ. ಸಂಜು ಸ್ಯಾಮ್ಸನ್, ಪಡಿಕಲ್, ನಿಶಾಮ್, ರಿಯಾನ್ ಮಿಡಲ್ ಆರ್ಡರ್ ನಲ್ಲಿ ಮಿಂಚುತ್ತಿದ್ದಾರೆ. ಬೌಲಿಂಗ್ ನಲ್ಲಿ ಟ್ರೆಂಟ್ ಬೋಲ್ಡ್, ಪ್ರಸಿದ್ಧ್ ಕೃಷ್ಣ ಪವರ್ ಪ್ಲೇ ನಲ್ಲಿ ವಿಕೆಟ್ ಪಡೆಯುತ್ತಿದ್ದಾರೆ. ಮಿಡಲ್ ನಲ್ಲಿ ರವಿಚಂದ್ರನ್ ಅಶ್ವಿನ್ ಯುಜವೇಂದ್ರ ಚಹಾಲ್ ವಿಕೆಟ್ ಬೇಟೆಯಾಡುತ್ತಿದ್ದಾರೆ. ಒಬೆಡ್ ಮೆಕಾಯ್, ನಿಶಾಮ್ ಐದನೇ ಬೌಲರ್ ಸ್ಥಾನ ತುಂಬುತ್ತಿದ್ದಾರೆ.
ಚೆನ್ನೈ ತಂಡದ ವಿಚಾರಕ್ಕೆ ಬಂದರೇ ಈಗಾಗಲೇ ಪ್ಲೇ ಆಫ್ಸ್ ನಿಂದ ಹೊರಬಿದ್ದಿರುವ ಕಾರಣ, ಪ್ರಯೋಗಕ್ಕೆ ಮುಂದಾಗಬಹುದು. ಬ್ಯಾಟಿಂಗ್ ನಲ್ಲಿ ಕಳೆದ ಪಂದ್ಯದಂತೆ ಹಿರಿಯರಿಗೆ ಕೋಕ್ ನೀಡಬಹುದು. ರುತುರಾಜ್, ಕಾನ್ವೇ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಿಮರ್ ಚೀತ್ ಸಿಂಗ್, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಮಹೀಶ ಪತಿರಣ ಬೌಲಿಂಗ್ ಶಕ್ತಿಗಳಾಗಿದ್ದಾರೆ. rr-vs-csk-match-Rajasthan Royals vs Chennai Super Kings