IPL ನಲ್ಲಿ ಕೊಹ್ಲಿ Never before ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ ದರ್ಶನ ತಾಳಿದ್ದರು.
ಈ ಮೊದಲಿನಂತೆ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ, ಆರ್ ಸಿಬಿಗೆ ರಾಯಲ್ ಗೆಲುವು ತಂದುಕೊಟ್ಟರು. ಅಲ್ಲದೇ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ 7000 ಸಾವಿರ ರನ್ ಗಡಿದಾಟಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 57 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ದಾರೆ.
235 ಇನ್ನಿಂಗ್ಸ್ ಗಳಲ್ಲಿ 7,000 ರನ್ ಗಳ ಗಡಿಯನ್ನು ತಲುಪಿರುವ ಕೊಹ್ಲಿ, ಐಪಿಎಲ್‌ನಲ್ಲಿ ಒಂದು ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.
2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡ ವಿರಾಟ್ ಕೊಹ್ಲಿ ಅಂದಿನಿಂದ ಇಂದಿನವರೆಗೂ ಅದೇ ತಂಡದಲ್ಲಿ ಆಡುತ್ತಿದ್ದಾರೆ.
ಕೊಹ್ಲಿ RCB ಪರವಾಗಿ 235 ಇನ್ನಿಂಗ್ಸ್‌ಗಳಲ್ಲಿ 7,000 ರನ್ ಗಳಿಸಿದ್ದಾರೆ, ಅದರಲ್ಲಿ 424 ರನ್ ಗಳು ಚಾಂಪಿಯನ್ಸ್ ಲೀಗ್‌ನಲ್ಲಿ ಮತ್ತು IPL ನಲ್ಲಿ ಇನ್ನುಳಿದ ರನ್ ಗಳು ಗಳಿಸಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ವರೆಗೂ ವಿರಾಟ್ ಕೊಹ್ಲಿ 213 ಇನ್ನಿಂಗ್ಸ್ ಗಳನ್ನಾಡಿದ್ದಾರೆ.
ಈ ಪೈಕಿ 36.42ರ ಸರಾಸರಿಯಲ್ಲಿ 129.33 ಸ್ಟ್ರೈಕ್ ರೇಟ್ ನಲ್ಲಿ 6592 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳಿವೆ. 44 ಅರ್ಧಶತಕಗಳಿವೆ. 576 ಬೌಂಡರಿಗಳು, 217 ಸಿಕ್ಸರ್ ಗಳಿವೆ.
ಆದ್ರೆ 15 ನೇ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಋತುವಿನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳನ್ನಾಡಿದ್ದಾರೆ.
ಇದರಲ್ಲಿ 23.77 ರ ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳಿದ್ದು, 30 ಬೌಂಡರಿಗಳು, ಏಳು ಸಿಕ್ಸರ್ ಗಳಿವೆ.
ಅಂದಹಾಗೆ ವಿರಾಟ್ ಕೊಹ್ಲಿ ಗುರುವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲಿನ ಟಚ್ ನಲ್ಲಿ ಕಾಣಿಸಿಕೊಂಡರು.
169 ರನ್ ಗಳ ಚೇಸಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಆರಂಭದಿಂದಲೇ ಬೌಲರ್ ಗಳ ಮೇಲೆ ಆಟ್ಯಾಕ್ ಮಾಡಿದರು.
ಪರಿಣಾಮ 54 ಎಸೆತಗಳಲ್ಲಿ ವಿರಾಟ್ ಕೊಹ್ಲಿ 73 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಹ್ಲಿ ಇನ್ನಿಂಗ್ಸ್ ನಲ್ಲಿ 8 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿವೆ.
ಗೆಲ್ಲಲೇಬೇಕಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆಟವಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ನಾನಾ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಅಲ್ಲದೇ ಹಿರಿಯ ಕ್ರಿಕೆಟ್ ಆಟಗಾರರು ಕೂಡ ಚೇಸಿಂಗ್ ಕಿಂಗ್ ಇಸ್ ಬ್ಯಾಕ್ ಎಂದು ವಿರಾಟ್ ಕೊಹ್ಲಿ ಅವರನ್ನ ಹೊಗಳುತ್ತಿದ್ದಾರೆ.
ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು.
ಈ ಪಂದ್ಯದಲ್ಲಿ ಆರ್ ಸಿಬಿ ಎಂಟು ವಿಕೆಟ್ ಗಳಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ಸ್ ಕನಸು ಜೀವಂತವಾಗಿದೆ.
ಬೆಂಗಳೂರು ತಂಡ ಪ್ರಸ್ತುತ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನುಳಿದ ಪಂದ್ಯಗಳಲ್ಲಿ ಸೋಲು ಕಂಡಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದ್ರೆ ಬೆಂಗಳೂರು ತಂಡದ ಪ್ಲೇ ಆಫ್ಸ್ ಭವಿಷ್ಯ ಡೆಲ್ಲಿ ಕ್ಯಾಪಿಟಲ್ಸ್ ಕೈಯಲ್ಲಿದೆ.
ಯಾಕಂದರೇ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದರೇ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ.