ಓಲಾ ಎಲೆಕ್ಟ್ರಿಕ್ ಸ್ಕೂಟರ್ – Ola S1 Pro ಬೆಲೆ 1.40 ಲಕ್ಷಕ್ಕೆ ಏರಿಕೆ…
ಇದೀಗ ಎಲೆಕ್ಟ್ರಿಕ್ ಸ್ಕೂಟಿಗಳ ಜಮಾನ, ನಿರೀಕ್ಷೆಗಿಂತ ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟಿಗಳು ರಸ್ತೆಯಲ್ಲಿ ಅಡ್ಡಾಡುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಓಲಾ ತನ್ನ ಸ್ಕೂಟರ್ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ. Ola ತನ್ನ S1 Pro ಮಾಡೆಲ್ ಸ್ಕೂಟಿ ಬೆಲೆಯನ್ನ ಹೆಚ್ಚಿಸಿರುವುದು ತಿಳಿಸಿದೆ. ಸದ್ಯ ಎಕ್ಸ್ ಶೋ ರೂಮ್ ಈಗ Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.40 ಲಕ್ಷ ರೂ.ಗೆ ಏರಿಕೆಯಾಗಿದೆ. ಅಲ್ಲಿಗೆ ಇದರ ಬೆಲೆ 10 ಸಾವಿರ ರೂಪಾಯಿ ಏರಿಕೆಯಾಗಿದೆ.
2021 ರಲ್ಲಿ 1.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. Ola S1 Pro ಬೆಲೆಯನ್ನು ಹೆಚ್ಚಿಸುತ್ತಿರುವುದು ಇದೇ ಮೊದಲು. Ola ಸ್ಕೂಟರ್ ತನ್ನ ಮೂರನೇ ಖರೀದಿ ಗೆ ಆನ್ಲೈನ್ ಬುಕ್ಕಿಂಗ್ ತೆರೆದಿದೆ, S1 Pro ಈಗಾಗಲೇ ದೇಶದ 5 ನಗರಗಳಲ್ಲಿ ಟೆಸ್ಟ್ ರೈಡ್ ಶಿಬಿರಗಳನ್ನು ನಡೆಸುತ್ತಿದೆ.

131 ಕಿಮೀ ವ್ಯಾಪ್ತಿಯನ್ನು ಹೊಂದಿದೆ S1 pro
ARAI ಪ್ರಕಾರ Ola S1 Pro ಸ್ಕೂಟರ್ 185km ವರೆಗೆ ಚಲಾಯಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದು ಕೇವಲ 131km ರೆಂಜ್ ವರೆಗೆ ತಲುಪಬಹುದು. ಇದರ ಗರಿಷ್ಠ ವೇಗ ಗಂಟೆಗೆ 115 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ. 0 ರಿಂದ 100 ಕಿಮೀ ವೇಗವನ್ನ ಪಡೆಯಲು 3 ಸೆಕೆಂಡುಗಳನ್ನ ತೆಗೆದುಕೊಳ್ಳುತ್ತದೆ. Ola S1 Pro 3.97 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 100 % ಚಾರ್ಜ್ ಮಾಡಲು 6.30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಆ್ಯಂಟಿ ಥೆಫ್ಟ್ ಅಲಾರಾಂ ಸಿಸ್ಟಮ್
ಇದರ ಫೀಚರ್ ಗಳ ಬಗ್ಗೆ ಮಾತನಾಡುವುದಾದರೆ, 7-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಸ್ಪೀಡೋಮೀಟರ್, ರಿಮೋಟ್ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, 36 ಲೀಟರ್ ಸ್ಟೋರೇಜ್ ಸಾಮರ್ಥ್ಯ ಮತ್ತು ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್ ಗಳನ್ನ ಒಳಗೊಂಡಿದೆ. ಟೈರ್ 12-ಇಂಚಿನ ಟೈಯರ್ ಗಳು ಗಾಡಿಯ ಸ್ಥಿರತೆಯನ್ನ ಕಾಪಾಡುತ್ತದೆ.
Ola S1 Pro ಸ್ಕೂಟಿ 10 ಬಣ್ಣಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಮಿಡ್‌ನೈಟ್ ಬ್ಲೂ, ಲಿಕ್ವಿಡ್ ಸಿಲ್ವರ್, ಮ್ಯಾಟ್ ಬ್ಲ್ಯಾಕ್, ಆಂಥ್ರಾಸೈಟ್ ಗ್ರೇ, ಮಾರ್ಷ್‌ಮ್ಯಾಲೋ, ಮಿಲೇನಿಯಲ್ ಪಿಂಕ್, ಕೋರಲ್ ಗ್ಲಾಮ್, ಪಿಂಗಾಣಿ ಬಿಳಿ, ನಿಯೋ ಮಿಂಟ್ ಮತ್ತು ಜೆಟ್ ಬ್ಲಾಕ್ ಸೇರಿವೆ. ಇತ್ತೀಚಿಗೆ 5 ತಿಂಗಳಲ್ಲಿ ಹೆಚ್ಚು ಮಾರಾಟವಾದ ಭಾರತದ ನಂಬರ್-1 ಎಲೆಕ್ಟ್ರಿಕ್ ಸ್ಕೂಟರ್ ಆಗಿ ಓಲಾ ಗುರುತಿಸಿಕೊಂಡಿದೆ.








