ತುಂಬಿ ತುಳುಕುತ್ತಿದ್ದ ಡ್ಯಾಮ್ ಮೇಲೆ ಯುವಕನ ಹುಚ್ಚಾಟ
ತಡೆಗೋಡೆ ಮೇಲೆ ಹತ್ತಲು ಹೋಗಿ ಕೆಳಗೆ ಬಿದ್ದ ಯುವಕ
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಘಟನೆ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಚಿಕ್ಕಬಳ್ಲಾಪುರ : ತುಂಬಿರುವ ಜಲಾಶಯ , ನದಿ , ಕಡೆಡರೆ ನೀರುಗಳ ಬಳಿ ಹುಚ್ಚು ಸಾಹಸ ಮಾಡುವಂತವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ.. ಇಂತಹ ಹುಚ್ಚುತನಕ್ಕೆ ಬಿದ್ದು ಹಲವರು ಜೀವನ ಕಳೆದುಕೊಂಡ್ರೂ ಸಹ ಜನರಿಗೆ ಬುದ್ದಿ ಬರುವುದಿಲ್ಲ..
ಇತ್ತೀಚೆಗೆ ತುಂಬಿ ತುಳುಕುತ್ತಿದ್ದ ಜಲಾಶಯದ ಗೋಡೆಯನ್ನು ಏರುವ ಸಾಹಸ ಮಾಡಿದ್ದ ಯುವಕನೊಬ್ಬ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆಯೊಂದು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ಕೆಲ ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ , ನದಿ , ಕೆರೆ , ಬಾವಿ ಕಟ್ಟೆಗಳು –ತುಂಬಿ ಹರಿಯುತ್ತಿವೆ.. ಅಂತೆಯೇ ಶ್ರೀನಿವಾಸ ಸಾಗರ ಜಲಾಶಯ ತುಂಬಿ ಕೋಡಿ ಹರಿಯುತ್ತಿದೆ. ಅನೇಕರು ಜಲಾಶಯದ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಮರುತ್ತಿರುತ್ತಾರೆ.. ಅಂತವರ ಪೈಕಿ ಕೆಲ ಹುಚ್ಚು ಸಾಹಸ ಮಾಡುವವರೂ ಕೂಡ ಇರುತ್ತಾರೆ..
ಅಂತೆಯೇ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ಎಂದು ಮುಗಿ ಬೀಳುತ್ತಿದ್ದು , ಭಾನುವಾರ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಧಿಡೀರ್ ಕೆಳಗೆ ಬಿದ್ದಿದ್ದಾನೆ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಗೌರಿಬಿದನೂರು ತಾಲ್ಲೂಕು ಮೂಲದವರು ಎನ್ನಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.