RCB | ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತೇವೆ.. ದಿನೇಶ್ ಕಾರ್ತಿಕ್
ಏಳು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿ, ಎರಡು ಪಂದ್ಯಗಳಲ್ಲಿ ಸೋತಾಗ ನಾವು ಸುಲಭವಾಗಿ ಪ್ಲೇ ಆಫ್ಸ್ ಪ್ರವೇಶಿಸಬಹುದು ಎಂದುಕೊಂಡಿದ್ದೇವು. ದ್ವಿತೀಯಾರ್ಧದಲ್ಲಿ ನಮ್ಮ ಪರಿಸ್ಥಿತಿ ದಾರುಣವಾಗಿತ್ತು. ಪ್ರತಿ ಪಂದ್ಯದಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ಆಡಿದ್ದು, ಈಗ ಪ್ಲೇ ಆಫ್ಸ್ ಗೆ ಎಂಟ್ರಿ ಕೊಟ್ಟಿರುವುದು ಸಂತೋಷ ತಂದಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಚೊಚ್ಚಲ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ. ಈಗಾಗಲೇ ಕೊಲ್ಕತ್ತಾಗೆ ಆಗಮಿಸಿರುವ ಬೆಂಗಳೂರು ತಂಡ ಭರ್ಜರಿ ತಾಲೀಮು ನಡೆಸುತ್ತಿದೆ.
ಈ ವೇಳೆ ಮಾತನಾಡಿದ ದಿನೇಶ್ ಕಾರ್ತಿಕ್, ಅಂತಿಮ ನಾಲ್ಕರ ಘಟ್ಟ ತಲುಪಿದ ಮೇಲೆ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ಪ್ಲೇ ಆಫ್ಸ್ ಆಡಲು ಎಲ್ಲಾ ಆಟಗಾರರು ತುಂಬಾ ಉತ್ಸುಕರಾಗಿದ್ದಾರೆ. ಇದೊಂದು ಗ್ರೇಟ್ ಟೂರ್ನಿಮೆಂಟ್. ಉತ್ತಮ ತಂಡದ ಪರ ಆಡುತ್ತಿರೋದು ಮತ್ತು ಇದೀಗ ಟೈಟಲ್ ರೇಸ್ ನಲ್ಲಿರುವು ಖುಷಿ ತಂದಿದೆ ಎಂದಿದ್ದಾರೆ.
ನಮಗೆ ಸಿಕ್ಕ ಅವಕಾಶವನ್ನು ನಾವು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ. ಅಲ್ಲದೇ ನಾವು ಈ ಬಾರಿ ಎಲ್ಲಾ ಆರ್ ಸಿಬಿ ಅಭಿಮಾನಿಗಳ ಮುಖದಲ್ಲಿ ನಗು ಮೂಡುವಂತೆ ಮಾಡುತ್ತೇವೆ ಎಂದಿದ್ದಾರೆ ದಿನೇಶ್ ಕಾರ್ತಿಕ್.
rcb-dinesh karthik reaction on eliminator match