ರಾತ್ರೋರಾತ್ರಿ ಪ್ರಿಯಕರನ ಜತೆ ವಧು ಎಸ್ಕೇಪ್!
ಕಲ್ಯಾಣ ಮಂಟಪದಿಂದ ರಾತ್ರೋರಾತ್ರಿ ಪರಾರಿ
ಚಿಕ್ಕಬಳ್ಳಾಪುರದ ವಿದುರಾಶ್ವತ್ಥ ಗ್ರಾಮದಲ್ಲಿ ಘಟನೆ
ಗೌರಿಬಿದನೂರು ಗ್ರಾಂ. ಠಾಣೆಯಲ್ಲಿ ಪ್ರಕರಣ ದಾಖಲು
ಪ್ರವೀಣ್ ಎಂಬುವವರೊಂದಿಗೆ ವೆನ್ನಲ ಪರಾರಿ
ಚಿಕ್ಕಬಳ್ಳಾಪುರ : ಕಲ್ಯಾಣ ಮಂಟಪದಿಂದ ರಾತ್ರೋ
ರಾತ್ರಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ನಡೆದಿದೆ.
ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ಮಧು ವೆನ್ನಲ ಹಾಗೂ ಗೌರಿಬಿದನೂರಿನ ಕರೇಕಲ್ಲಹಳ್ಳಿಯ ವರ ಸುರೇಶ್ ಗೆ ಮುದುವೆ ನಿಶ್ವಯವಾಗಿತ್ತು.
ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ವಧು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಪ್ರಿಯಕರ ಜೊತೆ ಪರಾರಿಯಾಗಿದ್ದಾರೆ.
ಪ್ರವೀಣ್ ಎಂಬುವವರ ಜೊತೆ ವಧು ವೆನ್ನಲ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಿಯಕರ ಪ್ರವೀಣ್ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.
ಇಂದು ಬೆಳಿಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಬೇಕಿತ್ತು.
ಅಷ್ಟರಲ್ಲಿ ವೆನ್ನಲಾ ಪರಾರಿಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವಿಧುವಿನ ಸಂಬಂಧಿಗಳು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. chikkaballapur bride escapes with her lover