Harshal Patel : ದೆತ್ ಓವರ್ ಗಳೆಂದರೇ ನನಗೆ ತುಂಬಾ ಭಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೆಯರ್ 2 ಕ್ಕೆ ತಲುಪಿದೆ. ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಬೌಲರ್ ಹರ್ಷಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. ಲಕ್ನೋ ಇನ್ನಿಂಗ್ಸ್ ನ 18 ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ದಾಳಿಗೆ ಬಂದರು.
ಆ ಓವರ್ ನಲ್ಲಿ ಮೊದಲೆರಡು ಎಸೆತಗಳನ್ನು ಹರ್ಷಲ್ ವೈಡ್ ಹಾಕಿದರು. ಬಳಿಕ ಓವರ್ ಮುಕ್ತಾಯಕ್ಕೆ ಕೇವಲ ಎರಡು ರನ್ ನೀಡಿ ಸ್ಟೋಯ್ನಿಸ್ ವಿಕೆಟ್ ಪಡೆದು, ಆರ್ ಸಿಬಿಗೆ ಬ್ರೇಕ್ ಥ್ಯೂ ನೀಡಿದರು.
ಈ ಪ್ರದರ್ಶನದ ಬಗ್ಗೆ ಹರ್ಷಲ್ ಪಟೇಲ್ ಮಾತನಾಡುತ್ತಾ, ದೆತ್ ಓವರ್ ನಲ್ಲಿ ಬೌಲಿಂಗ್ ಮಾಡೋದು ಅಂದ್ರೆ ಒತ್ತಡದಿಂದ ಕೂಡಿರುತ್ತದೆ. ಆ ಒತ್ತಡ ಎಂದರೇ ನನಗೆ ತುಂಬಾ ಇಷ್ಟ.

ಯಾಕಂದರೇ ನರ್ವಸ್ ಆಗಿದ್ದಾಗ ಸೂಪರ್ ಬೌಲಿಂಗ್ ಮಾಡೋದು ನನಗೆ ಇಷ್ಟವಾಗುತ್ತದೆ. ಅದನ್ನ ಲಕ್ನೋ ಪಂದ್ಯದಲ್ಲ ಮಾಡಿದ್ದೇನೆ.
ಕಳೆದ ಎರಡು-ಮೂರು ವರ್ಷಗಳಿಂದ ನಾನು ಹರಿಯಾಣ ಪರ ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ.
ಅದನ್ನ ಐಪಿಎಲ್ ನಲ್ಲಿ ಮುಂದುವರಿಸಲು ಬಯಸಿದ್ದೆ, ಅದರಂತೆ ನಿರ್ಣಾಯಕ ಪಂದ್ಯದಲ್ಲಿ ಆ ರೀತಿಯ ಪ್ರದರ್ಶನ ನೀಡಿದ್ದೇನೆ.
ಕೊನೆ ಓವರ್ ಗಳಲ್ಲಿ ಬೌಲಿಂಗ್ ಮಾಡೋದು ತುಂಬಾ ಒತ್ತಡದಿಂದ ಕೂಡಿರುತ್ತದೆ. ಇಂತಹ ಚಾಲೆಂಜ್ ಗಳನ್ನು ಸಮರ್ಥವಾಗಿ ಸ್ವೀಕರಿಸುತ್ತೇನೆ.
ಬರುವ ಸೌಥ್ ಆಫ್ರಿಕಾ ಸಿರೀಸ್ ನಲ್ಲಿ ಭುವಿ ಜೊತೆ ಹೊಸ ಚೆಂಡು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ ಹರ್ಷಲ್ ಪಟೇಲ್. harshal-patel-explains-his-mindset-while-bowling-death-overs








