Basavaraj bommai | ಸಿದ್ದರಾಮಯ್ಯ ಆರ್ಯರಾ..? ದ್ರಾವಿಡರಾ..?
ಬೆಂಗಳೂರು : ಆರ್ ಎಸ್ ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ ಸಿದ್ದರಾಮಯ್ಯ ಅವರು ಆರ್ಯರಾ..? ದ್ರಾವಿಡರಾ.. ಎಂಬೋದನ್ನ ಮೊದಲು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಆರ್ ಟಿ ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಬೊಮ್ಮಾಯಿ, ಮೊದಲು ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ ಅಂತ ಹೇಳಲಿ.
ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?. ಇದನ್ನು ಮೊದಲು ಅವರು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಕರಾವಳಿ ಭಾಗದಲ್ಲಿ ಮತ್ತೆ ಹಿಜಾಬ್ ವಿವಾದ ಮುನ್ನಲೆಗೆ ಬಂದ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಹಿಬಾಜ್ ವಿಚಾರವಾಗಿ ಈಗಾಗಲೇ ಕೋರ್ಟ್ ತನ್ನ ಆದೇಶ ನೀಡಿದೆ.
ಎಲ್ಲರೂ ಕೋರ್ಟ್ ಆದೇಶ ಪಾಲಿಸಬೇಕು, ಶೇಕಡಾ 99.99ರಷ್ಟು ಮಂದಿ ಕೋರ್ಟ್ ಆದೇಶ ಪಾಲಿಸಿದ್ದಾರೆ. ಹಿಜಾಬ್ ಬಗ್ಗೆ ಮಂಗಳೂರು ವಿವಿ ಸಿಂಡಿಕೇಟ್ ನಿರ್ಣಯ ತೆಗೆದುಕೊಂಡಿದೆ.
ಆಡಳಿತ ಮಂಡಳಿ ಏನು ನಿರ್ಧಾರ ಮಾಡುತ್ತಾರೋ ಅದನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. basavaraj-bommai-reacts-on-siddaramaiah-statement








