ರೆಬೆಲ್ ಸ್ಟಾರ್ 70ನೇ ಹುಟ್ಟು ಹಬ್ಬ – ಅಂಬಿ ಸಮಾಧಿ ಬಳಿ ಕುಟುಂಬಸ್ಥರಿಂದ ವಿಶೇಷ ಪೂಜೆ..
ಇಂದು ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ 70 ಜನ್ಮದಿನ. ಅಂಬಿ ಜನ್ಮ ದಿನದ ಪ್ರಯುಕ್ತ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಕಂಠೀರವ ಸ್ಟೂಡಿಯೋಗೆ ಆಗಮಿಸಿ ಅಂಬಿ ಸಮಾಧಿ ಎದರು ಜನ್ಮದಿನವನ್ನ ಆಚರಿಸುತ್ತಿದ್ದಾರೆ.
ಅಂಬಿ ಜನ್ಮದಿನದ ಪ್ರಯುಕ್ತ ಪತ್ನಿ, ಮಂಡ್ಯ ಸಂಸದೆ ಸುಮಲತ ಅಂಬರೀಶ್ ಅವರು ಭಾವುಕರಾಗಿ ಟ್ವೀಟಿ ಮಾಡಿ ಅಂಬಿ ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. ಆಕಾಶಕ್ಕೆ ಅಳತೆಯಿದೆಯೆ? ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ. ಅಂಬರೀಶ್ ಅಂದರೆ ಆಕಾಶದ ಒಡೆಯ ನಿಮ್ಮ ಪ್ರೀತಿಯ ಆ ಹೃದಯ ಮಿತಿಯನ್ನೇ ಮೀರಿದ್ದು ಅಸಂಖ್ಯಾತ ನೆನಪುಗಳನ್ನು ನೀವು ನನ್ನಲ್ಲಿ ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗುವಷ್ಟು ಸಂತಸ ಮತ್ತು ಪ್ರೀತಿ ನೀಡಿದ್ದೀರಿ.
ಶ್ರೀಮಂತ ಹೃದಯದ ಅಂಬಿಗೆ 70 ವರ್ಷ ಅನ್ನುವುದು ಅತ್ಯಂತ ಚಿಕ್ಕ ಸಂಖ್ಯೆ ಏಕೆಂದರೆ ನನ್ನಲ್ಲಿ ನೀವು ಶಾಶ್ವತವಾಗಿ ಜೀವಿಸಿದ್ದೀರಿ ಹಾಗಾಗಿ ನಿಮ್ಮ ವಯಸ್ಸೆನ್ನುವುದು ನಿಮಗೆ ಕೇವಲ ನಂಬರ್ ಅಷ್ಟೆ. ಅಂಬಿ ಎಂದಿಗೂ, ಎಂದೆಂದಿಗೂ ಅಮರ ಅಂಬಿ ಅಮರ. ಎಂದು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.
ಆಕಾಶಕ್ಕೆ ಅಳತೆಯಿದೆಯೆ?
ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ
ಅಂಬರೀಶ್ ಅಂದರೆ ಆಕಾಶದ ಒಡೆಯ
ನಿಮ್ಮ ಪ್ರೀತಿಯ ಆ ಹೃದಯ ಮಿತಿಯನ್ನೇ ಮೀರಿದ್ದು
ಅಸಂಖ್ಯಾತ ನೆನಪುಗಳನ್ನು ನೀವು ನನ್ನಲ್ಲಿ ಬಿಟ್ಟು ಹೋಗಿದ್ದೀರಿ.
ಈ ಜೀವನಕ್ಕೆ ಸಾಕಾಗುವಷ್ಟು ಸಂತಸ ಮತ್ತು ಪ್ರೀತಿ ನೀಡಿದ್ದೀರಿ
(1/2) pic.twitter.com/6WL71osHJG— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) May 29, 2022
ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಮನ ಸಲ್ಲಿಸಿದರು. ನಂತರ ಅಂಬರೀಶ್ ಅವರ ಹುಟ್ಟೂರಿಗೂ ಸುಮಲತಾ ಅಂಬರೀಶ್ ತೆರಳಿದರು.
ಅಂಬಿ ಜನ್ಮದಿನದ ಪ್ರಯುಕ್ತ ಪುತ್ರ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಭಿನಯದ ನೂತನ ಚಿತ್ರ “ಕಾಳಿ” ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.








