ITBP ಹೆಡ್ ಕಾನ್ಸ್‌ಟೇಬಲ್ ನೇಮಕಾತಿ 2022: 248 ಹುದ್ದೆಗಳಿಗೆ ಅರ್ಜಿ ಅಹ್ವಾನ…
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಇತ್ತೀಚೆಗೆ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ITBP ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜೂನ್ 8 ರಿಂದ ಜುಲೈ 7 ರವರೆಗೆ recruitment.itbpolice.nic.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
135 ಹೆಡ್ ಕಾನ್‌ಸ್ಟೆಬಲ್ ಪುರುಷ, 23 ಹೆಡ್ ಕಾನ್ಸ್‌ಟೇಬಲ್ ಮಹಿಳೆ ಮತ್ತು 90 ಹೆಡ್ ಕಾನ್ಸ್‌ಟೇಬಲ್ ಎಲ್‌ಡಿಸಿಇ ಸೇರಿದಂತೆ ಒಟ್ಟು 248 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ನಡೆಸಲಾಗುತ್ತಿದೆ.
ಅರ್ಹತೆಯ ಮಾನದಂಡಗಳು
ವಯಸ್ಸಿನ ಮಿತಿ: ಜನವರಿ 1, 2022 ರಂತೆ 18-25 ವರ್ಷಗಳು. ಪ್ರಚಲಿತ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ಇರಲಿದೆ.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ (10+2) ಉತ್ತೀರ್ಣಗೊಂಡಿರಬೇಕು.
ಕೌಶಲ್ಯ ಪರೀಕ್ಷೆ: ಕಂಪ್ಯೂಟರ್‌ನಲ್ಲಿ ಪ್ರತಿ ನಿಮಿಷಕ್ಕೆ ಇಂಗ್ಲಿಷ್‌ನಲ್ಲಿ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗ ತರಬೇತಿ ಹೊಂದಿರಬೇಕು
ಆಯ್ಕೆ ಪ್ರಕ್ರಿಯೆ
ITBP ಆಯ್ಕೆ ಪ್ರಕ್ರಿಯೆಯು PET/PST, ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ರೂ 100. ಸ್ತ್ರೀ/SC/ST/ESM ಗೆ ಶುಲ್ಕ ವಿನಾಯಿತಿ ಇದೆ.
ITBP ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ https://recruitment.itbpolice.nic.in/ ಗೆ ಭೇಟಿ ನೀಡಿ…








