BJP | ಡಿಕೆಶಿ ಅವರೇ ಕನಕಪುರ ಜೋಕೆ
ಬೆಂಗಳೂರು : ಡಿಕೆಶಿ ಅವರೇ, ನೀವು ನಿಂತ ನೆಲ ಬಿರುಕು ಬಿಡುತ್ತಿದೆ, ಪರಮೇಶ್ವರ್ ಅವರನ್ನು ನೆನಪಿಸಿಕೊಳ್ಳಿ, ಕನಕಪುರ ಜೋಕೆ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರು ಚದುರಂಗ ಆಟದಲ್ಲಿ ಬಾರಿ ನಿಸ್ಸಿಮರು.
ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ, ರಾಜನಂತೆ ಬಿಂಬಿಸಿ ಈಗ ಅವರ ಬೆಂಬಲಿಗರನ್ನೇ ಎತ್ತಿಕಟ್ಟುತ್ತಿದ್ದಾರೆ. ಡಿಕೆಶಿ, ಅಸಹಾಯಕರಾಗಿ ನಿಲ್ಲಬೇಕಷ್ಟೆ!
ಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ, ಪಕ್ಷದ ಪದಾಧಿಕಾರಿಗಳ ಪಟ್ಟಿ ಇವರೆಲ್ಲರಲ್ಲೂ ಡಿಕೆಶಿ ಅವರದ್ದು ನಾಮಕಾವಸ್ಥೆಯ ಸಹಿ ಮಾತ್ರ, ಅಧಿಕಾರದ ಛಾಪು ಕಾಣುತ್ತಲೇ ಇಲ್ಲ!
ಡಿಕೆಶಿ ಅವರೇ, ನೀವು ನಿಂತ ನೆಲ ಬಿರುಕು ಬಿಡುತ್ತಿದೆ, ಪರಮೇಶ್ವರ್ ಅವರನ್ನು ನೆನಪಿಸಿಕೊಳ್ಳಿ, ಕನಕಪುರ ಜೋಕೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.








