ಜೂನ್ 15ಕ್ಕೆ ಬ್ರಹ್ಮಾಸ್ತ್ರ ಟ್ರೈಲರ್ – ಟೀಸರ್ ಮೂಲಕ ರಿಲೀಸ್ ಡೇಟ್ ಆನಾವರಣ
ಬಾಲಿವುಡ್ ನ ಬಹುನಿರೀಕ್ಷಿತ ಮೈಥಲಾಜಿಕಲ್ ಫ್ಯಾಂಟಸಿ ಚಿತ್ರ ‘ಬ್ರಹ್ಮಾಸ್ತ್ರ ಭಾಗ ಒಂದು: ಶಿವ’ ಚಿತ್ರದ ಟ್ರೈಲರ್ ಜೂನ್ 15 ರಂದು ಅನಾವರಣಗೊಳ್ಳಲಿದೆ.
ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ತಾರಾಂಗಣದ 36 ಸೆಕೆಂಡ್ ಗಳ ವೀಡಿಯೊದ ಝಲಕ್ ಮೂಲಕ ಚಿತ್ರದ ಟ್ರೈಲರ್‌ಗೆ ಬಿಡುಗಡೆಗೆ ಸಂಬಂಧಿಸಿದಂತೆ ಇಂದು ಘೋಷಣೆ ಮಾಡಲಾಗಿದೆ.
ಬಿಡುಗಡಯಾಗಿರುವ ಸ್ಪೆಷಲ್ ವೀಡಿಯೋದಲ್ಲಿ ರಣಬೀರ್ ಶಿವನಾಗಿ ಮತ್ತು ಆಲಿಯಾ ಇಶಾಳಾಗಿ ಚಂಡಮಾರುತದಲ್ಲಿ ಸಿಕ್ಕಿ ಬೀಳುವುದನ್ನು ತೋರಿಸುತ್ತದೆ.
https://youtu.be/4sILTxvKfxk
ಈ ಚಿತ್ರವು ಭಗವಾನ್ ಶಿವನ ಪುರಾಣ ಮತ್ತು ಸರ್ವಶಕ್ತ ಬ್ರಹ್ಮಾಸ್ತ್ರವನ್ನು ಆಧರಿಸಿದ ಫ್ಯಾಂಟಸಿ ಟ್ರೈಲಾಜಿಯ ಮೊದಲ ಭಾಗವಾಗಿದೆ. ‘ಬ್ರಹ್ಮಾಸ್ತ್ರ ಭಾಗ 1: ಶಿವ’ ಎಂಬುದು “ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು ಮತ್ತು ಕಥೆಗಳಿಂದ ಸ್ಫೂರ್ತಿ ಪಡೆದ ಹೊಸ ಮೂಲ ಸಿನಿಮೀಯ ವಿಶ್ವವಾಗಿದೆ.
ಚಿತ್ರವನ್ನ ಎಸ್.ಎಸ್ ರಾಜಮೌಳಿ ಅವರು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಪ್ರಸ್ತುತಪಡಿಸಿದ್ದಾರೆ, ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಬ್ರಹ್ಮಾಸ್ತ್ರ ಸೆಪ್ಟೆಂಬರ್ 9 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ 5 ಭಾಷೆಗಳಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಮತ್ತು ಅಕ್ಕಿನೇನಿ ನಾಗಾರ್ಜುನ ಈ ಚಿತ್ರಕ್ಕೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.