Irfan Pathan | ಇರ್ಫಾನ್ ಐಪಿಎಲ್ ಬೆಸ್ಟ್ ತಂಡಕ್ಕೆ ಹಾರ್ದಿಕ್ ಕ್ಯಾಪ್ಟನ್
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಭಾನುವಾರ ಮುಕ್ತಾಯಗೊಂಡಿದೆ. ಐಪಿಎಲ್ 2022 ಚಾಂಪಿಯನ್ ಆಗಿ ಗುಜರಾತ್ ಟೈಟಾನ್ಸ್ ನಿಂತಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಗುಜರಾತ್ ಟೈಟಾನ್ಸ್ ಏಳು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಇನ್ನು ಈ ವರ್ಷ ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಎಲ್ಲರ ಮೆಚ್ಚುಗೆಗೆ ಪಡೆದಿವೆ.
ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಪ್ರಯತ್ನದಲ್ಲಿಯೇ ಟೈಟಲ್ ಗೆ ಮುತ್ತಿಟ್ಟಿದೆ.
ಕೆ.ಎಲ್.ರಾಹುಲ್ ನಾಯಕತ್ವ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ಸ್ ಪ್ರವೇಶ ಪಡೆದಿತ್ತು. ಮುಖ್ಯವಾಗಿ ಈ ವರ್ಷ ಆಯಾ ತಂಡಗಳಲ್ಲಿ ಯುವ ಆಟಗಾರರು ಧೂಳೆಬ್ಬಿಸಿದ್ದಾರೆ.
ಅದೇ ರೀತಿ ದಿನೇಶ್ ಕಾರ್ತಿಕ್, ಚಹಾಲ್, ಕುಲ್ ದೀಪ್ ಯಾದವ್ ಹಿರಿಯ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಐಪಿಎಲ್ 2022ರಲ್ಲಿ ತನ್ನ ಬೆಸ್ಟ್ ಎಲೆವಿನ್ ಅನ್ನು ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ.
ಇರ್ಫಾನ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ಅದೇ ರೀತಿ ಓಪನರ್ ಗಳಾಗಿ ಜೋಸ್ ಬಟ್ಲರ್, ಕೆ.ಎಲ್.ರಾಹುಲ್ ಆಯ್ಕೆ ಆಗಿದ್ದಾರೆ.
ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಇದ್ದಾರೆ. ಐದನೇ ಸ್ಥಾನದಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್, ಡೆವಿಡ್ ಮಿಲ್ಲರ್ ಇದ್ದಾರೆ.
ಇನ್ನು ಬೌಲಿಂಗ್ ಆಲ್ ರೌಂಡರ್ ಆಗಿ ರಶೀದ್ ಖಾನ್ ಇದ್ದು, ಹರ್ಷಲ್ ಪಟೇಲ್ ಇದ್ದಾರೆ.
ಅದೇ ರೀರಿ ಬೌಲರ್ ಗಳ ಕೋಟಾದಲ್ಲಿ ಮೊಹ್ಮದ್ ಶಮಿ, ಯಜುವೇಂದ್ರ ಚಹಾಲ್, ಉಮ್ರಾನ್ ಮಲಿಕ್ ಸ್ಥಾನ ಪಡೆದಿದ್ದಾರೆ. 12 ನೇ ಆಟಗಾರನಾಗಿ ಕುಲ್ ದೀಪ್ ಯಾದವ್ ಆಯ್ಕೆ ಆಗಿದ್ದಾರೆ. irfan-pathan-best-xi-of-ipl-2022








