ದಿವ್ಯಾಂಗ ಅಭಿಮಾನಿಯ ಕಣ್ಣೀರು ಒರೆಸಿದ ಧೋನಿ – ಮಹಿ ಬೇಟಿಯಲ್ಲಿ ಭಾವುಕರಾದ ಹುಡುಗಿ
IPL ನಲ್ಲಿ ಚೆನ್ನೈ ಉತ್ತಮ ಪ್ರದರ್ಶನ ನೀಡಲಿ ಅಥವಾ ನೀಡದಿರಲಿ ತಂಡದ ನಾಯಯ ಧೋನಿ ಮಾತ್ರ ಸುದ್ದಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ. IPL ಮುಗಿದ ನಂತರ ಆಟಗಾರರಲ್ಲರೂ ತಮ್ಮ ತವರಿಗೆ ಹಿಂತಿರುಗಿತ್ತಿದ್ದಾರೆ. ಅದರಂತೆ ಧೋನಿ ಕೂಡ ರಾಂಚಿಯ ವಿಮಾನ ಹತ್ತಿದ್ದಾರೆ.
ಧೋನಿ ರಾಂಚಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ದಿವ್ಯಾಂಗ ಅಭಿಮಾನಿಯೊಂದಿಗೆ ಸಮಯ ಕಳೆದಿದ್ದಾರೆ ಮತ್ತು ಆ ಅಭಿಮಾನಿಗೆ ಜೀವನದ ವಿಶೇಷ ಕ್ಷಣಗಳನ್ನ ಉಡುಗೆಯಾಗಿ ನೀಡಿದ್ದಾರೆ. ಅಭಿಮಾನಿ ಹುಡುಗಿ ಲಾವಣ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರ ಭೇಟಿಯಲ್ಲಿ ಲಾವಣ್ಯ ಭಾವುಕರಾದಾಗ ಧೋನಿ ಸ್ವತಃ ಕಣ್ಣೀರು ಒರೆಸಿದ್ದಾರೆ ಮತ್ತು ಎಂದಿಗೂ ಅಳಬೇಡಿ ಎಂದು ಹೇಳಿದರು.
ಲಾವಣ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಕಾರ, ಅವರು ಮೇ 31 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಧೋನಿಯನ್ನು ಭೇಟಿಯಾಗಿದ್ದರು. ಈ ವೇಳೆ ಅವರು ತಮ್ಮ ಸ್ಕೆಚ್ ಅನ್ನು ಧೋನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಲಾವಣ್ಯ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ – ಧೋನಿಯೊಂದಿಗಿನ ನನ್ನ ಭೇಟಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಕೈ ಕುಲುಕಿದ ರೀತಿ. ಇದು ನನ್ನ ಜೀವನದ ಅತ್ಯುತ್ತಮ ಅನುಭವ. ಧೋನಿಯನ್ನು ಭೇಟಿಯಾದ ನಂತರ ಲಾವಣ್ಯ ಭಾವುಕರಾದಾಗ, ಧೋನಿ ಕಣ್ಣೀರು ಒರೆಸಿ ಎಂದಿಗೂ ಅಳಬೇಡಿ ಎಂದು ಹೇಳಿದರು.
https://www.instagram.com/p/CeOBUjuBO80/
ಭೇಟಿಯ ವೇಳೆ ಲಾವಣ್ಯ ಮಾಡಿದ ಸ್ಕೆಚ್ ಅನ್ನು ಸ್ವತಃ ಧೋನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಲಾವಣ್ಯ “31 ಮೇ 2022 ಯಾವಾಗಲೂ ವಿಶೇಷವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮುಂದಿನ ಐಪಿಎಲ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ ಧೋನಿ
ಧೋನಿ IPL ನಿಂದ ದೂರವಾಗುವುದನ್ನ ಅಭಿಮಾನಿಗಳು ಒಪ್ಪಿಕೊಳ್ಳುವುದಿಲ್ಲ. ಧೋನಿ ಸಹ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ಮೈದಾನದಲ್ಲಿ ಆಡಲು ಬಯಸಿದ್ದು, ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿ ಎಸ್ ಕೆ ತಂಡಕ್ಕೆ ಈ ಭಾರಿ IPL ಅಷ್ಟೇನು ವಿಶೇಷವಾಗಿರಲಿಲ್ಲ, ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ವಿಫಲವಾಹಿತು. ಧೋನಿ ಅವರಿಂದಲೂ ನೀರಸ ಪ್ರದರ್ಶನ ಕಂಡು ಬಂತು . ಆದರೆ ಮುಂದಿನ ಭಾರಿ ಇನ್ನಷ್ಟು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುವ ವಿಶ್ವಾಸವನ್ನ ಧೋನಿ ವ್ಯಕ್ತ ಪಡಿಸಿದ್ದಾರೆ. ಇದನ್ನ ಚೆನೈ ಹಲವು ಋತುಗಳಲ್ಲಿ ತೋರಿಸಿಕೊಟ್ಟಿದೆ.








