Siraj | 7 ಕೋಟಿ.. 514 ರನ್ಸ್.. 31 ಸಿಕ್ಸರ್ಸ್.. 9 ವಿಕೆಟ್ಸ್.. ಸಿರಾಜ್ ಕಥೆ
ಇಂಡಿಯನ್ ಪ್ರಿಮಿಯರ್ ಲೀಗ್ 2022ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೊಹ್ಮದ್ ಸಿರಾಜ್ ಅವರನ್ನ ಏಳು ಕೋಟಿ ಕೊಟ್ಟು ರಿಟೈನ್ಡ್ ಮಾಡಿಕೊಂಡಿತ್ತು. ಕಳೆದ ಸೀಸನ್ ನ ಪರ್ಪಲ್ ಕ್ಯಾಪ್ ವಿನ್ನರ್ ಹರ್ಷಲ್ ಪಟೇಲ್ ಅವರನ್ನ ಬೇಡ ಎಂದು, ಸಿರಾಜ್ ಅವರನ್ನ ರಿಟೈನ್ಡ್ ಮಾಡಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಅವರನ್ನ ಆರ್ ಸಿಬಿ ಫ್ರಾಂಚೈಸಿ 10.75 ಕೋಟಿ ಕೊಟ್ಟು ಖರೀದಿ ಮಾಡ್ತು. ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ಹರ್ಷಲ್, ಈ ಸೀಸನ್ ನಲ್ಲಿ 15 ಮ್ಯಾಚ್ ಗಳಲ್ಲಿ 19 ವಿಕೆಟ್ ಪಡೆದಿದ್ದಾರೆ. ಆದ್ರೆ ಸಿರಾಜ್ ಮಾತ್ರ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಆಡಿದ 15 ಪಂದ್ಯಗಳಲ್ಲಿ ಸಿರಾಜ್ 9 ವಿಕೆಟ್ ಪಡೆದರು. ಅಲ್ಲದೇ 514 ರನ್ ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ 31 ಸಿಕ್ಸರ್ ಗಳನ್ನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿರಾಜ್ ಬೌಲರ್ ಬಗ್ಗೆ ಅನೇಕರು ಟೀಕೆಗಳನ್ನು ಮಾಡಿದ್ದಾರೆ.

ಆ ಸಾಲಿಗೆ ಟೀಂ ಇಂಡಿಯಾದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಬಂದಿದ್ದು, ಸಿರಾಜ್ ಅವರನ್ನ ಮುಂದಿನ ಸೀಸನ್ ನಲ್ಲಿ ಕೈ ಬಿಡಬೇಕು ಎಂದು ಸಲಹೆ ನೀಡಿದ್ದಾರೆ. ಆರ್ ಸಿಬಿ ಫ್ರಾಂಚೈಸಿ ಮೊಹ್ಮದ್ ಸಿರಾಜ್ ಗೆ ಏಳು ಕೋಟಿ ಕೊಟ್ಟಿದೆ. ನಿಮಗೆ ಅವಕಾಶ ಇದ್ದರೇ ನೀವು ಆತನನ್ನು ಬಿಟ್ಟುಬಿಡಬಹುದು. ಒಂದು ವೇಳೆ ಆತನನ್ನ ಬಿಟ್ಟರೇ ಬೇರೆಯಾರನ್ನ ಖರೀದಿ ಮಾಡುತ್ತಿರಿ..? ಅನ್ನೋದು ಪ್ರಶ್ನೆಯಾಗಿದೆ.
ಸಿರಾಜ್ ಅವರನ್ನ ಬಿಟ್ಟರೇ ಆತನ ಸ್ಥಾನದಲ್ಲಿ ಮತ್ತೊಬ್ಬ ಇಂಡಿಯನ್ ಬೌಲರನ್ನ ಖರೀದಿ ಮಾಡಬೇಕು. ಇದೆನ್ನಾ ಪಕ್ಕಕ್ಕೆ ಇಟ್ಟರೇ ಸಿರಾಜ್ ಅವರನ್ನ ಬಿಟ್ಟರೇ ಹರಾಜಿನಲ್ಲಿ ಅವರ ತುಂಬಾ ಕಡಿಮೆ ಮೊತ್ತಕ್ಕೆ ಸಿಗುತ್ತಾರೆ. ಸದ್ಯ ಆತ ಏಳು ಕೋಟಿಗೆ ಸೇಲ್ ಆಗುವ ಅವಕಾಶಗಳಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
ಇನ್ನು ಈ ಸೀಸನ್ ನಲ್ಲಿ ಆರ್ ಸಿಬಿ ಪರ ಜೋಷ್ ಹೆಜಲ್ ವುಡ್, ಹರ್ಷಲ್ ಪಟೇಲ್ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆಕಾಶ್ ದೀಪ್ ಕೂಡ ಪರವಾಗಿಲ್ಲ ಎಂಬಂತೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ








