ಸಂಧ್ಯಾವಂದನೆಯನ್ನು ಬೆಳಗ್ಗೆ ಮತ್ತು ಸಂಜೆಯ ಯಾವ ಸಮಯದಲ್ಲಿ ಮಾಡಬೇಕು?ಸಂಧ್ಯಾವಂದನೆ ಎಂದರೆ ಏನು?
ಸಂಧ್ಯಾಕಾಲ, ಅಂದರೆ ಸಂಧಿಯ ಅಥವಾ ಪರಿವರ್ತನೆಯ ಸಮಯದಲ್ಲಿ ದೇವರನ್ನ ವಂದಿಸುವುದು ಸಂಧ್ಯಾವಂದನೆ.
ಸಂಧಿ ಸಮಯ ಅಂದರೆ ಏನು?
ಇದು ಸೂರ್ಯನ ಗತಿಯನ್ನ ಆಧರಿಸಿದ ಸಮಯ.
(Transition moment)
ಆ ಗತಿಯನ್ನು ಆಧರಿಸಿ ಒಂದು ದಿನದಲ್ಲಿ ಮೂರು ಸಂಧಿ ಸಮಯಗಳು ಇವೆ. ಅವೇ ತ್ರಿಸಂಧ್ಯಾ ಕಾಲಗಳು.
· ಸೂರ್ಯ ಮೂಡುವ ಸಮಯ ಪ್ರಾತಃಸಂಧಿ.
· ಸೂರ್ಯ ಮುಳುಗುವ ಸಮಯ ಸಾಯಂ ಸಂಧಿ,
· ಸೂರ್ಯ ಮೇಲೇರಿ ಕೆಳಗಿಳಿಯುವ ಮಧ್ಯಾನ್ಹದ ಸಮಯ ಮಾಧ್ಯಾನ್ಹ ಸಂಧಿ.
ಈ ಸಂಧಿ ಕಾಲದಲ್ಲಿ ಮಾಡುವ ದೇವರ ಧ್ಯಾನವು ಅತ್ಯಂತ ಪ್ರಶಸ್ತ ಮತ್ತು ಅದು ದೇವರಿಗೆ ನೇರವಾಗಿ ತಲುಪುತ್ತದೆ ಎಂದು ನಮ್ಮ ಪುರಾಣ ಹೇಳುತ್ತದೆ.
ಸಂಧ್ಯಾವಂದನೆಯನ್ನು ಮಾಡಲು ಪ್ರಶಸ್ತವಾದ ಸಮಯ ಯಾವುದು?
ಪ್ರಾತಃಕಾಲ :-
· ಸೂರ್ಯ ಹುಟ್ಟುವುದಕ್ಕೆ ಸ್ವಲ್ಪ ಸಮಯ ಮೊದಲು, ಅಂದರೆ ಅರುಣೋದಯದ ಸಮಯದಲ್ಲಿ. ಸಾಮಾನ್ಯವಾಗಿ ಬೆಳಿಗ್ಗೆ 6 ಗಂಟೆಗೆ.
· ಮುಂಜಾನೆಯ ಸಂಧ್ಯಾವಂದನೆಯು ದೇವಿ ಸರಸ್ವತಿಯನ್ನು ಪ್ರಸನ್ನಗೊಳಿಸದತ್ತದೆ.
ಮಾಧ್ಯಾನ್ಹ ಕಾಲ :-
· ಸೂರ್ಯನು ಮೇಲೇರಿ ಕೆಳಗಿಳಿಯುವ ಸ್ವಲ್ಪ ಸಮಯ ಮೊದಲು. ಸಾಮಾನ್ಯವಾಗಿ ಮಧ್ಯಾನ್ಹ 12 ಗಂಟೆಗೆ.
· ಮಧ್ಯಾನ್ಹದ ಸಂಧ್ಯಾವಂದನೆಯು ಲಕ್ಷ್ಮಿಯನ್ನು ಸುಪ್ರೀತಗೊಳಿಸುತ್ತದೆ.
ಸಾಯಂಕಾಲ :-
· ಸೂರ್ಯನು ಮುಳುಗುವ ಸ್ವಲ್ಪ ಸಮಯ ಮೊದಲು. ಸಾಮಾನ್ಯವಾಗಿ ಸಂಜೆ 6 ಗಂಟೆಗೆ.
· ಸಂಜೆಯ ಸಂಧ್ಯಾವಂದನೆಯಿಂದ ದೇವಿ ಪಾರ್ವತಿಯ ಕೃಪೆ ದೊರೆಯುತ್ತದೆ.
(ಈ ಸಮಯಗಳು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕನುಗುಣವಾಗಿ ಸ್ವಲ್ಪ ಬದಲಾಗುತ್ತವೆ ).
ಸಂಧ್ಯಾವಂದನೆಯನ್ನು ಯಾಕೆ ಮತ್ತು ಯಾರು ಮಾಡವೇಕು?
· ನಾವು ಮನುಷ್ಯ ಸಹಜವಾಗಿ ನಮಗೆ ತಿಳಯದೆ ಬಹಳಷ್ಟು ತಪ್ಪುಗಳನ್ನು ಮಾಡುತ್ತೇವೆ. ಹಾಗೆ ನಮಗೆ ತಿಳಿಯದೆ ಆಗುವ ತಪ್ಪುಗಳನ್ನ ನಿವಾರಿಸಿಕೊಳ್ಳಲು ಸಂಧ್ಯಾವಂದನೆ ಅಥವಾ ದೇವರ ಧ್ಯಾನ ಮಾಡಬೇಕು.
o ತಿಳಿದೂ ಮಾಡುವ ತಪ್ಪುಗಳು ಸಂಧ್ಯಾವಂದನೆಯಿಂದ ನಿವಾರಣೆ ಆಗದು. ಅದಕ್ಕೆ ಬೇರೆಯದೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.
· ಉಪನಯನವಾದ ಪ್ರತಿಯೊಬ್ಬ ಪುರುಷನೂ ಸಂಧ್ಯಾವಂದನೆ ಮಾಡಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿ.
· ಮದುವೆಯಾದ ನಂತರ ಆ ಜವಾಬ್ದಾರಿ ದುಪ್ಪಟ್ಟಾಗುತ್ತದೆ. ಯಾಕೆಂದರೆ ಗಂಡನ ಪ್ರತಿಯೊಂದು ಪುಣ್ಯದಲ್ಲೂ ಅರ್ಧಭಾಗ ಹೆಂಡತಿಗೆ ಹೋಗುತ್ತದೆ ಮತ್ತು ಹೆಂಡತಿ ಮಾಡುವ ಪ್ರತಿಯೊಂದು ತಪ್ಪು ಅಥವಾ ಪಾಪದ ಅರ್ಧಭಾಗ ಗಂಡನಿಗೆ ವರ್ಗಾವಣೆ ಆಗುತ್ತದೆ. ಆದುದರಿಂದ ಹೆಂಡತಿಯ ತಪ್ಪಿನ ಅಥವಾ ಪಾಪದ ನಿವಾದಣೆಗಾಗಿ ಮತ್ತು ತನ್ನ ಪುಣ್ಯದ ಪೂರ್ಣತೆಯ ಸಿದ್ಧಿಗಾಗಿ ಸಂಧಿ ಕಾಲದ ದೇವರ ಆರಾಧನೆ ಪುರುಷರ ಜವಾಬ್ದಾರಿ ಎನಿಸಿಕೊಳ್ಳುತ್ತದೆ.
· ವೇದ ಶಾಸ್ತ್ರದ ಪ್ರಕಾರ ದಿನದ ಮೂರೂ ಸಂಧಿಕಾಲದಲ್ಲಿ ದೇವರ ವಂದನೆ ಮಾಡಬೇಕು. ಅದು ಆಗದ ಪಕ್ಷದಲ್ಲಿ ಎರಡು ಬಾರಿಯಾದರೂ ಮಾಡಬೇಕು.
ಏನಿದರ ಮಹತ್ವ?
· ಸಂಧ್ಯಾವಂದನೆಯಲ್ಲಿ ಗಾಯತ್ರಿ ಜಪವು ಅತ್ಯಂತ ಪ್ರಮುಖವಾದುದು. ಗಾಯತ್ರಿ ಮಂತ್ರವನ್ನು ವೇದಗಳ ತಾಯಿ ಅನ್ನುತ್ತಾರೆ.
· 24 ಅಕ್ಷರಗಳನ್ನು ಹೊಂದಿದ ಗಾಯತ್ರಿ ಜಪವು 24 ದೇವರನ್ನು ಪ್ರತಿನಿಧಿಸುತ್ತದೆ ಮತ್ತು ಹತ್ತು ಶಬ್ದಗಳುಳ್ಳ ಗಾಯತ್ರಿ ಜಪವು ವಿಷ್ಣುವಿನ ದಶಾವತಾರವನ್ನು ಪ್ರತಿನಿಧಿಸುತ್ತದೆ.
· ಅಂದರೆ ಒಂದು ಗಾಯತ್ರಿ ಜಪವು 24 ದೇವಸ್ಮರಣೆಗೆ ಸಮ.
ಎಷ್ಟು ಗಾಯತ್ರಿ ಜಪದ ಸ್ಮರಣೆ ಮಾಡವೇಕು?
· ಒಂದು ದಿನದಲ್ಲಿ ಕನಿಷ್ಠ ಹತ್ತು ಮತ್ತು ಗರಿಷ್ಠ ಮೂರು ಸಾವಿರ ಗಾಯತ್ರಿ ಜಪದ ಸ್ಮರಣೆ ಮಾಡಬೇಕು ಎಂದು ಶಾಸ್ತ್ರವು ಹೇಳುತ್ತದೆ.
ಇದು ವೇದಗಳಲ್ಲಿ ಹೇಳಿರುವಂತೆ ಸಂಧ್ಯಾವಂದನೆಯನ್ನು ಮಾಡುವ ಸಮಯ ಮತ್ತು ಅದರ ಮಹತ್ವ.
ಈಗ ಪ್ರಶ್ನೆಯ ಎರಡನೇ ಭಾಗ.
ಈ ಶಾಸ್ತ್ರದ ಹಿಂದೆ ವೈಜ್ಞಾನಿಕ ಕಾರಣ ಇದೆಯೇ?
· ಇದು ನಿಜವಾಗಿಯೂ ಶಾಸ್ತ್ರ ಅಲ್ಲ. ಅದೇ ವಿಜ್ಞಾನ. ಶಾಸ್ತ್ರವೇ ನಿಜವಾದ ವಿಜ್ಞಾನ. ನಮ್ಮ ಪ್ರತಿಯೊಂದು ಆಚರಣೆಯೂ ಅರ್ಥಬದ್ಧವಾಗಿಯೇ ಇದೆ. ಅದು ಸುಮ್ಮನೆ ಮಾಡಿರುವುದಲ್ಲ.
ಹಾಗಾದರೆ ಏನಿದರ ಹಿಂದಿರುವ ವಿಜ್ಞಾನ?
· ಮನುಷ್ಯನ ದೇಹದಲ್ಲಿ 72000 ಸಾವಿರ ಪ್ರಧಾನ ನಾಡಿಗಳಿವೆ. ಗಾಯತ್ರಿ ಜಪ ಅಥವಾ ದೇವರ ಧ್ಯಾನದಿಂದ ಹೊರಹೊಮ್ಮುವ ತರಂಗಗಳ ತೇಜಸ್ಸು ಆ ನಾಡಿಗಳನ್ನ ಜಾಗ್ರತಗೊಳಿಸುತ್ತದೆ. ತನ್ಮೂಲಕ ಸುಗಮ ರಕ್ತಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
· ಒಂದು ಗಾಯತ್ರಿ ಮಂತ್ರವು 24 ಜಪಕ್ಕೆ ಸಮವಾಗಿರುವುದರಿಂದ ಒಟ್ಟು ಜಪದ ಮೊತ್ತವು ದಿನಕ್ಕೆ ನಮ್ಮದೇಹದ ನಾಡಿ ಸಂಖ್ಯೆಗಿಂತ ಹೆಚ್ಚಾಗಬಾರದು. ಅದಕ್ಕಾಗಿ ಗರಿಷ್ಠ 3000 ಗಾಯತ್ರಿ ಜಪ ಮಾಡಬೇಕು ಅನ್ನುವ ನಿರ್ಬಂಧ. (24 x 3000 = 72000).
· ನಾಡಿಗಳ ಮೇಲಾಗುವ ಅತಿಯಾದ ತೇಜಸ್ಸು ಕೂಡಾ ಒಳ್ಳೆಯದಲ್ಲ ಅನ್ನುವುದು ಇದರ ಹಿಂದಿನ ವೈಜ್ಞಾನಿಕ ತತ್ವ.
· ಗಾಯತ್ರಿ ಜಪವು ಪ್ರಪಂಚದ ಅತಿ ಶಕ್ತಿಶಾಲಿ ಮಂತ್ರ ಎಂದು ಸಾಬೀತಾಗಿದೆ. ಗಾಯತ್ರಿ ಮಂತ್ರ ಪಠಣೆಯು ಪ್ರತಿ ಸೆಕೆಂಡಿಗೆ ಸುಮಾರು 110000 ಧ್ವನಿ ತರಂಗಗಳನ್ನು ಉತ್ಪಾದಿಸುತ್ತದೆ. ಅದರಿಂದ ಮನುಚ್ಯನ ದೈಹಿಕ ಮತ್ತು ಮಾನಸಿಕ ಶಕ್ತಿಯು ಅತ್ಯುನ್ನತ ಮಟ್ಟಕ್ಕೆ ತಲುಪುತ್ತದೆ.
ಇನ್ನು, ತ್ರಿಸಂಧ್ಯಾ ಕಾಲವೇ ದೇವರ ಧ್ಯಾನಕ್ಕೆ ಏಕೆ ಸೂಕ್ತ?
· ಮುಂಜಾನೆ ಸೂರ್ಯನ ಅತಿನೇರಳೆ ಕಿರಣಗಳು (ultra violet rays) ಮನಸ್ಸನ್ನು ಉಲ್ಲಸಿತಗೊಳಿಸಿ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದು ದಿನದ ಕೆಲಸವನ್ನು ಸುಗಮಗೊಳಿಸಲು ಸಹಕರಿಸುತ್ತದೆ.
o ಆಗ ತಾನೆ ಹುಟ್ಟುವ ಸೂರ್ಯನ ಶಾಂತ ಮತ್ತು ಪ್ರಥಮ ಕಿರಣಗಳು ಮನಸ್ಸಿನ ಕಾಂತಿಯನ್ನು ಇಮ್ಮಡಿಗೊಳಿಸುತ್ತವೆ.
· ಏರುತ್ತಿರುವ ಸೂರ್ಯನ ಶಕ್ತಿಶಾಲಿ ಪ್ರಭೆಯು ಮನುಷ್ಯನ ಶಕ್ತಿಯನ್ನು ಜಾಗ್ರತವಾಗಿಸುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
o ಮೇಲೆರಿ ಕೆಳಗಿಳಿಯುವಾಗಿನ ಸಮಯದಲ್ಲಿನ ಸೂರ್ಯಕಿರಣಗಳು ತನ್ನ ಪ್ರಖರತೆಯನ್ನು ಕಡಿಮೆಗೊಳಿಸುವುದರೊಂದಿಗೆ ತನ್ನ ದಿನದ ಕೆಲಸವನ್ನು ಮುಗಿಸುವ ಸಮಯಕ್ಕೆ ಹತ್ತಿರವಾಗುವುದರಿಂದ ಒಂದು ಧನ್ಯತೆ ತುಂಬಿರುತ್ತದೆ.
· ಮುಳುಗುತ್ತಿರುವ ಸೂರ್ಯನಿಂದ ಹೊರಹೊನ್ಮುವ ಅತಿಗೆಂಪು ಅಥವಾ ಇನ್ಫ್ರಾರೆಡ್ ಕಿರಣಗಳು (infra red) ನಮ್ಮ ನರಮಂಡಲವನ್ನು ಜಾಗ್ರತಗೊಳಿಸುತ್ತವೆ. ಈ ಕ್ರಿಯೆಯಿಂದ ನಮ್ಮ ನಿದ್ರೆಯಲ್ಲೂ ಮಿದುಳಿನ ಕಾರ್ಯ ಸುಗಮವಾಗುತ್ತದೆ.
o ತನ್ನ ದಿನದ ಕೆಲಸವನ್ನು ಮುಗಿಸುತ್ತಿರುವ ಸೂರ್ಯನು ಅತ್ಯಂತ ಶಾಂತನಾಗಿ ನಮ್ಮ ಮನಸ್ಸಿಗೆ ತಂಪೆರೆಯುತ್ತಾನೆ.
ಒಟ್ಟಾರೆಗಾಗಿ ಈ ಸಮಯದಲ್ಲಿ ಮಾಡುವ ಗಾಯತ್ರಿ ಜಪದಿಂದ ಹೊಹೊಮ್ಮುವ ಶಬ್ದದ ತರಂಗಗಳು ಸೂರ್ಯನ ಶಕ್ತಿಯುತ ಕಿರಣಗಳೊಂದಿಗೆ ಸೇರಿ ಸುತ್ತಲಿನ ಪರಿಸರದಲ್ಲಿ ಸಕಾರಾತ್ಮಕ ಶಕ್ತಿಯನ್ನು (positive energy) ಹೆಚ್ಚಿಸುತ್ತವೆ.
· ಆದರೆ, ಎಲ್ಲ ವೇದ ಮಂತ್ರಗಳನ್ನೂ ಸಹ ತಜ್ಞರಿಂದ ಉಪದೇಶ ಪಡೆದೇ ಮಾಡಬೇಕು. ಅಲ್ಲಿ ಯಾವುದೇ ರೀತಿಯ ಸ್ವರ, ವರ್ಣ ಮತ್ತು ತಂತ್ರದಲ್ಲಿ ಲೋಪವಾಗಬಾರದು.
· ಲೋಪದ ಮಂತ್ರೋಚ್ಛಾರವು ನಕಾರಾತ್ಮಕ ಶಕ್ತಿಯನ್ನು (negative energy) ಪ್ರಚೋದಿಸುತ್ತದೆ.








