Andhra Pradesh: ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 178 ಮಹಿಳೆಯರು ಅಸ್ವಸ್ಥ
ವಿಶಾಖಪಟ್ಟಣಂನ ಅಚ್ಯುತಪುರಂನಲ್ಲಿರುವ ಪಶುವೈದ್ಯಕೀಯ ಔಷಧಿ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಅಮೋನಿಯಂ ಅನಿಲ ಸೋರಿಕೆಯಾಗಿ ಪಕ್ಕದ ಕಾರ್ಖಾನೆಯ ಸುಮಾರು 178 ಮಹಿಳಾ ಉದ್ಯೋಗಿಗಳು ಅಸ್ವಸ್ಥರಾಗಿರುವ ಘಟನೆ ನಡೆಯುತ್ತಿದೆ.
ಅಚ್ಚುತಪುರಂನಲ್ಲಿರುವ APIIC (ಆಂಧ್ರ ಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ) SEZ ನ ಹೊರಗಿರುವ ಪೋರಸ್ ಲ್ಯಾಬ್ನಿಂದ ಅನಿಲ ಸೋರಿಕೆಯಾಗಿದೆ. ಇದರ ಪರಿಣಾಮ ಪಕ್ಕದ ಅಪೆರಲ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
https://twitter.com/Journo_Samrat/status/1532663032135815169
ಮಹಿಳಾ ಕಾರ್ಮಿಕರಿಗೆ ಕಣ್ಣುಗಳಲ್ಲಿ ಉರಿ ಮತ್ತು ವಾಂತಿ ಪ್ರಾರಂಭವಾಯಿತು. ಮೊದಲು ಅಸ್ವಸ್ಥರನ್ನ SEZ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿತ್ತು, ನಂತರ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಎಸ್ಪಿ ಸಿಟಿ ಗೌತಮ್ ಸಾಲಿ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟು 178 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಜಿ ಅಮರನಾಥ್ ತಿಳಿಸಿದ್ದಾರೆ.
https://twitter.com/girivsk/status/1532632837177741312
ಆಂಧ್ರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅನಿಲ ಸೋರಿಕೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥದಲ್ಲಿ ತಿಳಿಸಿದ್ದಾರೆ.








