ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಮತ್ತೆ ಬಾಲಿವುಡ್ ಸಿನಿಮಾ ಸೌತ್ ಸಿನಿಮಾ ಮುಂದೆ ಸೋತಿದೆ.. ಹೌದು.. ವಿಕ್ರಮ್ ಸಿನಿಮಾ ಎದುರು ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಸಿನಿಮಾ ಪೃಥ್ವಿರಾಜ್ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ . ಆದ್ರೆ ವೀಕೆಂಡ್ ವರೆಗೂ ಬಾಕ್ಸ್ ಆಫೀಸ್ ನ ಲೆಕ್ಕಾಚಾರ ಗೊತ್ತಾಗೋದಿಲ್ಲ.. ವೀಕೆಂಡ್ ನಲ್ಲಿ ಯಾವ ಸಿನಿಮಾ ಗೆಲ್ಲುತ್ತೋ ಅದೇ ಸಿನಿಮಾಗೆ ಜನರ ಒಲವು ಹೆಚ್ಚು ಅಂತ ಹೇಳಬಹುದು,,
ಈ ಮೂರೂ ಸಿನಿಮಾಗಳಿಗೂ ಸಮಾನ ಕ್ರೇಜ್ ರೇಂಜ್ ಇದೆ.. ಸ್ಟಾರ್ ಗಳಿದ್ದಾರೆ.. ಬಾಕ್ಸ್ ಆಫೀಸ್ ನಲ್ಲಿ ಸಮಬಲದ ಫೈಟ್ ಇರಲಿದೆ.. ಪ್ರೇಕ್ಷಕರು ಯಾವ ಸಿನಿಮಾಗೆ ಮಣೆ ಹಾಕ್ತಾರೆ ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ಗೆಲ್ಲುತ್ತೆ.. ಯಾವ ಸಿನಿಮಾ ಕಲೆಕ್ಷನ್ ಅಧಿಕ ಇದೆಲ್ಲವನ್ನೂ ಕಾದು ನೋಡ್ಬೇಕಿದೆ..
ಸಾಮ್ರಾಟ್ ಪೃಥ್ವಿರಾಜ್ 10.40 ಕೋಟಿ ರೂಪಾಯಿ ಗಳಿಸಿದೆ.. 300 ಕೋಟಿ ಬಜೆಟ್ನ ಸಿನಿಮಾ, ಮೊದಲ ದಿನ 10 ಕೋಟಿ ಗಳಿದ್ದು ಸಿನಿಮಾ ಫ್ಲಾಪ್ ಆಗುವ ಲಕ್ಷಣ ಎಂಬುದು ವ್ಯಾಪಾರ ವಿಶ್ಲೇಷಕರ ಮಾತು..
ಇತ್ತ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡ್ತಿದೆ.. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಕೇವಲ ತಮಿಳುನಾಡಿನಲ್ಲೇ 20 ಕೋಟಿ ಗಳಿಸಿದೆ.. ತಮಿಳುನಾಡು ಬಿಟ್ಟು ಭಾರತ ಹಾಗೂ ವಿಶ್ವಾದ್ಯಂತ ಸುಮಾರು 45 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಅಂದ್ರೆ ಒಟ್ಟಾರೆ ಸುಮಾರು 65 ಕೋಟಿ ಗಳಿಸಿದೆ.. ಶೀಘ್ರವೇ 100 ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವೇ ಇಲ್ಲ.