ಕಳೆದ 24 ಗಂಟೆಗಳಲ್ಲಿ 4257 ಕರೊನಾ ಸೋಂಕಿತರು ಪತ್ತೆ….
ದೇಶದಲ್ಲಿ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ 4257 ಹೊಸ ರೋಗಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಮಾರ್ಚ್ 8 ರ ನಂತರ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿವೆ. ಈ ತಿಂಗಳಲ್ಲಿ ಎರಡನೇ ಬಾರಿಗೆ ಹೊಸ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಜೂನ್ 2 ರಂದು ದೇಶಾದ್ಯಂತ 4041 ಜನರ ವರದಿಯಲ್ಲಿ ಪಾಸಿಟೀವ್ ಕಂಡು ಬಂದಿತ್ತು.
ಶನಿವಾರ 15 ಸೋಂಕಿತರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. 2612 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 22,691 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶಾದ್ಯಂತ 4.31 ಕೋಟಿ ಜನರು ಇಲ್ಲಿಯವರೆಗೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4.26 ಕೋಟಿ ಮಂದಿ ಗುಣಮುಖರಾಗಿದ್ದರೆ, 5.24 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
CORBEVAX ಬೂಸ್ಟರ್ ಡೋಸ್ ಗೆ ಅನುಮೋದನೆ..
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) CORBEVAX ಲಸಿಕೆಯನ್ನು ಕರೋನಾ ಬೂಸ್ಟರ್ ಡೋಸ್ ಆಗಿ ಅನುಮೋದಿಸಿದೆ. CovaShield ಅಥವಾ Covaxin ನ ಎರಡೂ ಡೋಸ್‌ಗಳನ್ನು ತೆಗೆದುಕೊಂಡ 18 ವರ್ಷಕ್ಕಿಂತ ಮೇಲ್ಪಟ್ಟ ಜನರು ಈಗ ತುರ್ತು ಸಂದರ್ಭದಲ್ಲಿ CORBEVAX ಅನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು.








