ಪಬ್ ಜಿ ಆಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೆ ಗುಂಡಿಕ್ಕಿ ಕೊಂದ ಪುತ್ರ…
ಪಬ್ ಜಿ ಗೇಮ್ ಅಡಿಕ್ಟ್ ಆಗಿದ್ದ ಮಗನೊಬ್ಬ ತಾಯಿಯನ್ನ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖ್ನೋನಲ್ಲಿ ನಡೆದಿದೆ.
ಪಬ್ ಜಿ ಗೇಮ್ ಮತ್ತು ಇನ್ಸ್ಟಾಗ್ರಾಂ ಗೆ ವ್ಯಸನಿಯಾಗಿದ್ದ ಮಗನಿಗೆ ಬೈದು ಬುದ್ದಿ ಹೇಳಿದ್ದಕ್ಕೆ 16 ವರ್ಷದ ಪುತ್ರ ಮನೆಯಲ್ಲಿದ್ದ ಲೈಸೆನ್ಸ್ ಗನ್ ನಿಂದ ತನ್ನ ತಾಯಿಯನ್ನ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. 40 ವರ್ಷದ ಸಾಧನಾ ಸಿಂಗ್ ಮೃತ ದುರ್ದೈವಿ. ಕೊಲೆಯಾದ ಮೃತ ದೇಹದ ಜೊತೆ ಅಪ್ರಾಪ್ತ ಮತ್ತು 9 ವರ್ಷದ ಆತನ ತಂಗಿ ಎರಡು ಹಗಲು ಮೂರು ರಾತ್ರಿ ವಾಸ ಮಾಡಿದ್ದಾರೆ. ಕೊಲೆ ವಿಷಯ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ತಂಗಿಗೆ ಬೆದರಿಕೆ ಹಾಕಿದ್ದಾನೆ.
ಮೂರು ದಿನದ ನಂತರ ಶವ ಕೊಳೆತು ವಾಸನೆ ಬರಲಾರಂಭಿಸಿದ ನಂತರ ಡೀಯೋಡ್ರೆಂಟ್, ರೂಮ್ ಪ್ರೆಶ್ನರ್ ಹೊಡೆದು ಅಪ್ರಾಪ್ತರು ಹೋಗಲಾಡಿಸಲು ಯತ್ನಿಸಿದ್ದಾರೆ. ಮಂಗಳವಾರ ರಾತ್ರಿ ವಾಸನೆ ತೀವ್ರವಾಗಿದ್ದು ತಂದೆ ನವೀನ್ ಸಿಂಗ್ ಗೆ ಪೋನ್ ಮಾಡಿ ಯಾರೋ ಅಮ್ಮನನ್ನ ಕೊಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದಾರೆ.
ನವೀನ್ ಸಿಂಗ್ ನೆರಮನೆಯ ದಿನೇಶ್ ಸಿಂಗ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ದಿನೇಶ್ ಮನೆ ಬಳಿ ಹೋದಾಗ ತಾಯಿಯನ್ನ ಯಾರೋ ಕೊಂದಿದ್ದಾರೆ ಎಂದು ಹೇಳಿದ್ದಾರೆ. ದಿನೇಶ್ ರೂಮ್ ಗೆ ಹೊದಾಗ ವಾಸನೆ ಸಹಿಸಲಾಗದೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಪೊಲೀಸರು ಮಕ್ಕಳಿಬ್ಬರನ್ನ ಹೊರಕರೆದೊಯ್ದು ರೂಮ್ ಸೀಲ್ ಮಾಡಿದ್ದಾರೆ. ನಂತರ ತನಿಖೆ ಪ್ರಾರಂಭಿಸಿದಾಗ ಪೊಲೀಸರು ಮಕ್ಕಳಿಬ್ಬರನ್ನ ವಿಚಾರಣೆ ನಡೆಸಿದಾಗ ನಂತರ ನಡೆದ ಘಟನೆ ಬೆಳಕಿಗೆ ಬಂದಿದೆ. ನಂತರ ಅಪ್ರಾಪ್ತ ಬಾಲಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.








