ಹದ್ದು ಜೀವ ಉಳಿಸಲು ಕಾರಿನಿಂದ ಕೆಳಗಿಳಿದ ವ್ಯಕ್ತಿಗೆ ಅಫಘಾತ – ಸಾವು…
ಕಾರಿಗೆ ಸಿಕ್ಕಿ ಬಿದ್ದಿದ್ದ ಪಕ್ಷಿಯನ್ನ ಉಳಿಸಲು ಕೆಳಗಿಳಿದ ವ್ಯಕ್ತಿಗಳು ಮೇಲೆ ಟ್ಯಾಕ್ಸಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾ ವರ್ಲಿ ಸೀ ಲಿಂಕ್ನಲ್ಲಿ ನಡೆದಿದು ಹದ್ದು ಉಳಿಸಲು ಕಾರಿನಿಂದ ಇಳಿದ ಇಬ್ಬರು ವ್ಯಕ್ತಿಗಳ ಮೇಲೆ ಟ್ಯಾಕ್ಸಿ ಡಿಕ್ಕಿ ಹೊಡೆದಿದೆ.
ಮೇ 30 ರಂದು ಈ ಘಟನೆ ನಡೆದಿದೆ. 43 ವರ್ಷದ ಅಮರ್ ಮನೀಶ್ ಜರಿವಾಲಾ ಅವರು ತಮ್ಮ ಕಾರಿನಲ್ಲಿ ಸೀ ಲಿಂಕ್ ಸೇತುವೆ ಮೂಲಕ ಹಾದು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಹದ್ದು ಅವರ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿತು. ಮನೀಶ್ ಕೂಡಲೇ ಕಾರು ನಿಲ್ಲಿಸಿ ಕೆಳಗೆ ಇಳಿದು ಹದ್ದು ಉಳಿಸಲು ಮುಂದಾದರು. ಅವರ ಹಿಂದೆ ಅವನ ಡ್ರೈವರ್ ಕೂಡ ಕೆಳಗಿಳಿದಿದ್ದರು.
CCTV footage of #Worli #Sealink #mumbai #accident by taxi cab while two person stop their car on bridge. #mumbairain @mumbaimatterz @MNCDFbombay @WorliResidents @WRWAAlmWorli @mid_day pic.twitter.com/YOTmpz49vG
— Mohsin shaikh 🇮🇳 (@mohsinofficail) June 9, 2022
ಅದೇ ಸಮಯಕ್ಕೆ ಹಿಂದಿನಿಂದ ಬಂದ ಟ್ಯಾಕ್ಸಿ ರಸ್ತೆಯಲ್ಲಿ ಇವರನ್ನ ಗಮನಿಸಿಯೂ ನಿಲ್ಲಿಸದೇ ಡಿಕ್ಕಿ ಹೊಡೆದು ಹೊರಟು ಹೋಗಿದೆ. ಅಫಘಾತದ ರಭಸಕ್ಕೆ ಮನೀಶ್ ಮತ್ತು ಅವರ ಚಾಲಕ ಗಾಳಿಗೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅಮರ್ ಮನೀಶ್ ಜರಿವಾಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಅಮರ್ ಅವರ ಚಾಲಕ ಶ್ಯಾಮ್ ಸುಂದರ್ ಕಾಮತ್ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಅಮರ್ ಗೆ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ತುಂಬಾ ಪ್ರೀತಿ ಇದೆ ಎಂದು ಕುಟುಂಬ ತಿಳಿಸಿದೆ. ಅವರ ಪಕ್ಷಿ ಪ್ರೀತಿಯೇ ಅವರ ಸಾವಿಗೆ ಕಾರಣವಾಗಿದೆ. ಅಮರ್ ದಕ್ಷಿಣ ಬಾಂಬೆಯ ನೆಪೀನ್ಸೀ ರಸ್ತೆಯಲ್ಲಿರುವ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಯಾವುದೋ ಕೆಲಸದ ನಿಮಿತ್ತ ಮಲಾಡ್ಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ವರ್ಲಿ ಪೊಲೀಸರು ಟ್ಯಾಕ್ಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.