Ravi Shastri | ಉಮ್ರಾನ್ ಮಲಿಕ್ ಗೆ ಅವಕಾಶ ನೀಡಬಾರದು
ಇಂಡಿಯನ್ ಪ್ರಿಮಿಯರ್ ಲೀಗ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ಉಮ್ರಾನ್ ಮಲಿಕ್ ಅದ್ಭುತ ಪ್ರದರ್ಶನ ನೀಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಈ ಸೀಸನ್ ನಲ್ಲಿ 14 ಪಂದ್ಯಗಳನ್ನಾಡಿದ್ದರು.
ಈ ಪೈಕಿ 20.18 ಸರಾಸರಿಯಲ್ಲಿ 444 ರನ್ ನೀಡಿ 22 ವಿಕೆಟ್ ಪಡೆದಿದ್ದರು. ಹಾಗೆ 25 ರನ್ ನೀಡಿ ಐದು ವಿಕೆಟ್ ಪಡೆದಿದ್ದು ಅವರ ಶ್ರೇಷ್ಠ ಪ್ರದರ್ಶನವಾಗಿದೆ.
ಅಲ್ಲದೇ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುವ ಮಲಿಕ್ ಸಾಮರ್ಥ್ಯವನ್ನು ಇಡಿ ಕ್ರಿಕೆಟ್ ಜಗತ್ತು ಮೆಚ್ಚುಕೊಂಡಿದೆ.
ಇದೇ ಕಾರಣಕ್ಕಾಗಿ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಅವರನ್ನ ಆಯ್ಕೆ ಮಾಡಲಾಗಿದೆ.
ಆದ್ರೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಉಮ್ರಾನ್ ಮಲಿಕ್ ಗೆ ಸಿಗಲಿಲ್ಲ.
ಆದ್ರೂ ಮುಂದಿನ ಐಸಿಸಿ ಟೂರ್ನಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಮಲಿಕ್ ಅವರನ್ನ ಟೀಂ ಇಂಡಿಯಾದ ವೇಗದ ಅಸ್ತ್ರವನ್ನಾಗಿಸಬೇಕು ಎಂದು ಹಲವರು ವಾದಿಸುತ್ತಿದ್ದಾರೆ.
ಇದು ಹೀಗಿದ್ದರೇ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಬೂಸ್ಟ್ ಮಾಡುವ ಕೆಲಸದಲ್ಲಿ ಬಿಸಿಸಿಐ ನಿರತವಾಗಿದೆ. ಇದರ ಭಾಗವಾಗಿಯೇ ಅರ್ಷದೀಪ್ ಸಿಂಗ್, ಉಮ್ರಾನ್ ಮಲ್ಲಿಕ್ ಅವರಂತಹ ಯುವ ಆಟಗಾರರಿಗೆ ಮಣೆಹಾಕುತ್ತಿದೆ.
ಈ ನಡುವೆ ಉಮ್ರಾನ್ ಮಲಿಕ್ ಅವರನ್ನು ಉದ್ದೇಶಿಸಿ ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಟಿ 20 ವಿಶ್ವಕಪ್ ಗೆ ಉಮ್ರಾನ್ ಮಲಿಕ್ ಅವರನ್ನ ಟೀಂ ಇಂಡಿಯಾಗೆ ಆಯ್ಕೆ ಮಾಡಬಾರದು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಉಮ್ರಾನ್ ಮಲಿಕ್ ಗೆ ಟಿ 20 ಕ್ರಿಕೆಟ್ ನಲ್ಲಿ ಬೇಕಿರುವ ಅನುಭವ ಇಲ್ಲ. ಉಮ್ರಾನ್ ಮಲಿಕ್ ಮತ್ತಷ್ಟು ಸುಧಾರಣೆ ಆಗಬೇಕಾಗಿದೆ.
ಹೀಗಾಗಿ ಟಿ 20 ವಿಶ್ವಕಪ್ ಗೆ ಆತನನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಕೂಡದು. ಆತನನ್ನು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಸ್ವಲ್ಪ ದಿನ ಆಡಲು ಬಿಡಬೇಕು.
ಅದೇ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೂಡ ಅವರಿಗೆ ಅವಕಾಶಗಳನ್ನು ನೀಡಬೇಕು. ಆತ ಎರಡು ರೀತಿಯ ಕ್ರಿಕೆಟ್ ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಅನ್ನೋದನ್ನ ನೋಡಬೇಕಾಗಿದೆ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಟಿ 20 ಸರಣಿಯ ಭಾಗವಾಗಿ ಎರಡನೇ ಟಿ 20 ಪಂದ್ಯ ಕಟಕ್ ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಗೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.