Brahmastra : ನಂದಿ ಅಸ್ತ್ರ ಪಾತ್ರದಲ್ಲಿ ನಾಗಾರ್ಜುನ್.. ಫಸ್ಟ್ ಲುಕ್ ಹೇಗಿದೆ ಗೊತ್ತಾ..?
ಬಾಲಿವುಡ್ ನಲ್ಲಿ ಸೆಟ್ಟೇರಿರುವ ಪ್ಯಾನ್ ಇಂಡಿಯಾ ಸಿನಿಮಾ “ಬ್ರಹ್ಮಾಸ್ತ್ರ”. ತೆಲುಗಿನಲ್ಲಿ “ಬ್ರಹ್ಮಾಸ್ತ್ರಂ” ಎಂಬ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಅಯಾನ್ ಮುಖರ್ಜಿ ನಿರ್ದೇಶನದ ರಾಕಿಂಗ್ ಸ್ಟಾರ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಈ ಚಿತ್ರದಲ್ಲಿ ಬಾಲಿವುಡ್ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಜೊತೆಗೆ ಟಾಲಿವುಡ್ ಕಿಂಗ್ ನಾಗಾರ್ಜುನ “ನಂದಿ ಅಸ್ತ್ರ”ದ ಶಕ್ತಿ ಹೊಂದಿರುವ ಅನೀಶ್ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ನಾಗಾರ್ಜುನ್ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಬ್ರಹ್ಮಾಸ್ತ್ರ ಟ್ರೈಲರ್ ಜೂನ್ 15 ರಂದು ಬಿಡುಗಡೆಯಾಗಲಿದೆ.
ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಮಹತ್ವಾಕಾಂಕ್ಷೆಯ ಚಿತ್ರ ಸೆಪ್ಟೆಂಬರ್ 9 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.