ಠಾಣೆ ಆವರಣದಲ್ಲಿ ಗಿಡ ತಿಂದಿದ್ದಕ್ಕೆ ಹಸುಗಳನ್ನ ಅರೆಸ್ಟ್ ಮಾಡಿದ ಪೋಲಿಸರು….
ಪೊಲೀಸ್ ಠಾಣೆ ಅವರಣದಲ್ಲಿ ನೆಟ್ಟಿದ್ದ ಗಿಡಗಳನ್ನ ಹಸುಗಳು ತಿಂದಿದ್ದಕ್ಕೆ ಹಸುಗಳನ್ನ ಠಾಣೆ ಕಾಂಪೌಂಡ್ ಒಳಗೆ ಕಟ್ಟಿ ಹಾಕಿ ಅರೆಸ್ಟ್ ಮಾಡಿರುವ ಘಟನೆ ಹಾಸನದ ಬೇಲೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಸುಗಳನ್ನ ಕಾಪೌಂಡ್ ನಲ್ಲಿ ಕೂಡಿ ಹಾಕಿ ವೃದ್ದೆಯರಿಬ್ಬರಿಗೆ ಪೊಲೀಸರು ಸತಾಯಿಸಿದ್ದಾರೆ. ತಮ್ಮ ಹಸುಗಳನ್ನ ಬಿಟ್ಟು ಕಳಿಸುವಂತೆ ಮಾಲೀಕರಾದ ಸಿದ್ದಮ್ಮ,ನಿಂಗಮ್ಮ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ಹಾಸನ ಬೇಲೂರು ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಸ್ಥಳಿಯ ನಿವಾಸಿಗಳಾದ ಸಿದ್ದಮ್ಮ, ಮತ್ತು ನಿಂಗಮ್ಮ ಅವ್ರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನ ತಿಂದಿವೆ. ಇದರಿಂದ ಬೇಸತ್ತ ಠಾಣಾ ಸಿಬ್ಬಂದಿ ಸಿಪಿಐ ಯೋಗೀಶ್ ಆದೇಶದಂತೆ ಹಸುಗಳನ್ನ ಬಿಡದಂತೆ ಠಾಣೆ ಬಳಿಯಲ್ಲಿ ಕಟ್ಟಿ ಹಾಕಿದ್ದಾರೆ.
ವೃದ್ದೆಯರಿಬ್ಬರು ಬೇಡಿಕೊಂಡರೂ ಹಸುಗಳ ಬಿಟ್ಟಿಲ್ಲ. ಹಸುಗಳಿಂದ ಹಾಲು ಕರೆಯಲು ಅವಕಾಶವೇ ನೀಡಲಿಲ್ಲ ಎಂಬುದು ಮಾಲೀಕರ ಆರೋಪ. ಹಾಲು ಕರೆಯದೆ ಹೋದ್ರೆ ಹಸುಗಳಿಗೆ ಕೆಚ್ಚಲಬಾಹು ಬರುತ್ತೆ. ನಾವು ಕೂಲಿಗೆ ಹೋಗಲು ಆಗಲ್ಲ . ಈ ಹಸುಗಳೇ ಜೀವನಾಧಾರ ಅಂದ್ರು ಪೊಲೀಸ್ ಸಿಬ್ಬಂದಿ ಹಸು ಬಿಟ್ಟಿಲ್ಲ.
ನಂತರ ಸಾರ್ವಜನಿಕರು ಹಸು ಬಿಡುವಂತೆ ಒತ್ತಾಯಿಸಿದಾಗ ರಾತ್ರಿ 10.30 ಕ್ಕೆ ವೃದ್ಧೆಯರಿಬ್ಬರ ಹಸುಗಳನ್ನ ಬಿಡುಗಡೆ ಮಾಡಿದ್ದಾರೆ. ಅಫರಾಧಿಗಳನ್ನ ಹಿಡಿಯಲು ಮೀನಾಮೇಷ ಎಣಿಸುವ ಪೊಲೀಸರು ಹಸುಗಳ ವಿಷಯದಲ್ಲಿ ಈ ರೀತಿ ಮಾಡಬಾರದಿತ್ತು ಎಂದು ಸಾರ್ವಜನಿಕ ವಲಯದಲಲ್ಲಿ ಟೀಕೆ ಟಿಪ್ಪಣಿಗಳು ಕೇಳಿ ಬಂದಿವೆ.