Ind Vs SA 3rd T20 | ಆತನಿಗೆ ಚಾನ್ಸ್ ನೀಡಿ.. ಪಂತ್ ಗೆ ಜಹೀರ್ ಸಲಹೆ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಕಟಕ್ ನಲ್ಲಿ ಪಂದ್ಯವನ್ನು ಸೋತಿರುವ ಭಾರತ ಕ್ರಿಕೆಟ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕು.
ಇಲ್ಲವಾದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್, ಏಕದಿನ ಸರಣಿಯಲ್ಲಿ ಎದುರಾದ ಪರಾಜಯಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಅವಕಾಶ ಮಿಸ್ ಆಗುತ್ತದೆ.
ಅಲ್ಲದೇ ರೋಹಿತ್ ಶರ್ಮಾ, ಹೆಡ್ ಕೋಚ್ ರೋಹಿತ್ ಶರ್ಮಾ ಜವಾಬ್ದಾರಿಗಳನ್ನು ತೆಗೆದುಕೊಂಡ ಬಳಿಕ ಸ್ವದೇಶದಲ್ಲಿ ಇಲ್ಲಿಯವರೆಗೂ ಸರಣಿ ಸೋತಿಲ್ಲ.
ಈಗ ಇನ್ನೊಂದು ಪಂದ್ಯ ಸೋತರೇ ಆ ಸರಣಿ ಜಯಗಳ ಯಾತ್ರೆಗೆ ಬ್ರೇಕ್ ಬೀಳಲಿದೆ.
ಇನ್ನು ಕಳೆದೆರಡು ಪಂದ್ಯಗಳಲ್ಲಿ ಸೋತಿರುವ ಟೀಂ ಇಂಡಿಯಾ ಬಗ್ಗೆ ಮಾತನಾಡಿದ ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್, ಕಾಶ್ಮೀರ್ ಸ್ಪಿಡರ್ ಉಮ್ರಾನ್ ಮಲಿಕ್ ಅವರನ್ನು ಪ್ಲೇಯಿಂಗ್ ಇಲೆವೆಲ್ ನಲ್ಲಿ ಕರೆದುಕೊಂಡು ಬರಬೇಕು.
ಮಲಿಕ್ ಟೀಂ ಇಂಡಿಯಾಗೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಜಹೀರ್ ಖಾನ್, ಮಲಿಕ್ ಅವರ ಎಕ್ಸ್ ಟ್ರಾ ಸ್ಪೀಡ್ ತಂಡಕ್ಕೆ ಉಪಯುಕ್ತವಾಗುತ್ತದೆ.
ಐಪಿಎಲ್ ನಲ್ಲಿ ಆತನ ಪ್ರದರ್ಶನ ನಾವೆಲ್ಲಾ ನೋಡಿದ್ದೇವೆ. ಟಿ 20 ಲೀಗ್ ನಲ್ಲಿ ಡೆವಿಡ್ ಮಿಲ್ಲರ್ ಅವರನ್ನು ಮಲಿಕ್ ಔಟ್ ಮಾಡಿದ್ದರು.
ತನ್ನ ವೇಗದ ಮೂಲಕ ಎದುರಾಳಿ ಬ್ಯಾಟರ್ ಗಳಿಗೆ ಕಡಿವಾಣ ಹಾಕಬಹುದು.
ಟೀಂ ಇಂಡಿಯಾದಲ್ಲಿ ಉಮ್ರಾನ್ ಮಲಿಕ್ ಖಂಡಿತವಾಗಿ ಪ್ರಭಾವ ಬೀರುತ್ತಾರೆ ಎಂದು ವಾದಿಸಿದ್ದಾರೆ.
ಇನ್ನು ಇಂಡೋ – ಆಫ್ರಿಕಾ ಮೂರನೇ ಟಿ 20 ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಅಲ್ಲಿನ ಪಿಚ್ ಚಿಕ್ಕದಾಗಿದ್ದು, ಸ್ಪಿನ್ನರ್ ಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಹೀಗಾಗಿ ಉಮ್ರಾನ್ ಮಲಿಕ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸಬೇಕು ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ಉಮ್ರಾನ್ ಮಲಿಕ್ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.