Sharad Pawar : ರಾಷ್ಟ್ರಪತಿ ಎಲೆಕ್ಷನ್ : ವಿಪಕ್ಷಗಳಿಗೆ ಶರದ್ ಪವಾರ್ ಶಾಕ್
ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷಗಳಿಗೆ ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಶಾಕ್ ನೀಡಿದ್ದಾರೆ.
ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆ ಕಣದಿಂದ ದೂರ ಉಳಿಯಲು ಶರದ್ ಪವಾರ್ ನಿರ್ಧರಿಸಿದ್ದಾರೆ.
‘ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ.
ರಾಷ್ಟ್ರಪತಿ ರೇಸ್‌ನಲ್ಲಿ ನಾನು ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಇರುವುದಿಲ್ಲ ಎಂದು ಶರದ್ ಪವಾರ್ ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಎನ್‌ಸಿಪಿ ಸಭೆಯಲ್ಲಿ ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾಗಿರುವ ಸಂಖ್ಯಾ ಬಲವನ್ನು ಒಟ್ಟುಗೂಡಿಸಲು ಸಫಲವಾಗುತ್ತವೆ ಎಂಬ ನಂಬಿಕೆ ಶರದ್ ಪವರ್ ಗೆ ಇಲ್ಲ.
ಹೀಗಾಗಿ ಸ್ಪರ್ಧಿಸಿ ಸೋಲುವುದಕ್ಕೆ ಅವರಿಗೆ ಇಷ್ಟ ಇಲ್ಲ ಎಂದು ಎನ್ ಸಿಪಿ ಮೂಲಗಳು ತಿಳಿಸಿವೆ. ಆದ್ರೆ ಪವಾರ್ ತಮ್ಮ ಅಭಿಪ್ರಾಯವನ್ನು ಕಾಂಗ್ರೆಸ್ ಗೆ ತಿಳಿಸಿಲ್ಲ ಎಂದು ತಿಳಿದುಬರುತ್ತಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದವಿ ಕಾಲ ಜುಲೈ 24 ರಂದು ಮುಗಿಯಲಿದೆ. ಇದರಿಂದ ಜುಲೈ 18 ರಂದು ಹೊಸ ರಾಷ್ಟ್ರಪತಿಗಾಗಿ ಚುನಾವಣೆ ನಡೆಯಲಿದೆ.








