ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಮತ್ತು ಗಾಳಿ ಸಹಿತ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿಗೆ ಮಳೆರಾಯ ತಂಪೆರೆದರೆ ಸಿಲಿಕಾನ್ ಸಿಟಿ ನಾನಾ ಕಡೆಗಳಲ್ಲಿ ದೊಡ್ಡ ಪ್ರಮಾಣ ನಷ್ಟವಾಗಿದೆ.
ಸದಾಶಿವನಗರ, ಜಯನಗರ, ನಾಗರಭಾವಿ, ಮೆಜೆಸ್ಟಿಕ್, ಕಾರ್ಪೋರೇಶನ್ ಸರ್ಕಲ್, ಕೆ.ಆರ್ ಸರ್ಕಲ್, ಬನಶಂಕರಿ, ಸೇರಿದಂತೆ ನಗರದ ವಿವಿಧೆಡೆ ಭಾರಿ ಮಳೆಯಾಗಿದೆ. ಅಲ್ಲದೆ ನಗರದ ನಾನಾ ಕಡೆಗಳಲ್ಲಿ ಗಾಳಿ ಸಹಿತ ಮಳೆಗೆ ಮರಗಳು ನೆಲಕ್ಕುರುಳಿವೆ. ಬೆಂಗಳೂರಿನ ಪಶ್ಚಿಮ ವಲದಲ್ಲಿ 11, ಆರ್.ಆರ್.ನಗರದಲ್ಲಿ 12. ದಾಸರಹಳ್ಳಿ 2,ಯಲಹಂಕ 12, ಮಹಾದೇವಪುರ 2, ದಕ್ಷಣಿ ವಲಯದಲ್ಲಿ 6 ಸೇರಿದಂತೆ 60ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ನೆಲಕ್ಕುರುಳಿರುವ ಮರಗಳ ತೆರವಿನ ಕಾರ್ಯಚರಣೆ ಬಿಬಿಎಂಪಿ ನಡೆಸುತ್ತಿದೆ.








