ಸಪ್ರೀಂ ಕೋರ್ಟ್ ನ ನ್ಯಾಯಾಮೂರ್ತಿಗಳಾದ ಎಂ.ಆರ್ ಶಾ ಅವರಿಗೆ ಹೃದಯಾಘಾತವಾಗಿದೆ.. ಹಿಮಾಚಲ ಪ್ರದೇಶದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆಗೆ ಅವರನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನ್ಯಾಯಮೂರ್ತಿ ಎಂಆರ್ ಶಾ ಪಾಟ್ನಾ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಗುಜರಾತ್ ಹೈಕೋರ್ಟ್ನ ಮಾಜಿ ನ್ಯಾಯಾಧೀಶರೂ ಆಗಿದ್ದಾರೆ. ಅವರು 2023ರ ಮೇ 15ರಂದು ನಿವೃತ್ತರಾಗಲಿದ್ದಾರೆ.
ಸುಪ್ರೀಂ ಕೋರ್ಟ್ ಅಧಿಕಾರಿಗಳು ಗೃಹ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಎಂಆರ್ ಶಾ ಅವರ ಚಿಕಿತ್ಸೆಗೆ ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆದೊಯ್ಯಲಾಗಿದೆ.