ಅಗ್ನಿಪಥ್ ಯೋಜನೆ ವಿರೋಧಿಸಿ ಶುಕ್ರವಾರವೂ ಮುಂದುವರೆದ ಪ್ರತಿಭಟನೆ…
ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಕೇಂದ್ರ ಸರ್ಕಾರ ಪರಿಚಯಿಸಿದ ನೂತನ ನೇಮಕಾತಿ ಯೋಜನೆಯಾದ ‘ಅಗ್ನಿಪಥ್’ ವಿರುದ್ಧ ಸತತ ಎರಡನೇ ದಿನವೂ ಪ್ರತಿಭಟನೆಗಳು ಮುಂದುವರೆಯುತ್ತಿವೆ. ಇಂದು ಶುಕ್ರವಾರ ಪ್ರತಿಭಟನಾಕಾರರು ಬಿಹಾರದ ವಿವಿಧ ಜಿಲ್ಲೆಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಬಿಹಾರದ ಬೇಗುಸರೈ, ಲಖಿಸರಾಯ್ ಜಿಲ್ಲೆಗಳಲ್ಲಿ ಉದ್ರಿಕ್ತ ಯುವಕರ ಗುಂಪು ರಸ್ತೆ ತಡೆ ನಡೆಸುತ್ತಿದ್ದಾರೆ. ಯುವಕರು ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ರೈಲುಗಳ ಸಂಚಾದಲ್ಲಿ ವ್ಯತ್ಯಯ ಉಂಟಾಗಿದೆ. ಬೇಗುಸರೈ ಜಿಲ್ಲೆಯ ಸಾಹೇಬ್‌ಪುರ್‌ಕಮಲ್ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿ ಭಾರೀ ಗಲಾಟೆ ಸೃಷ್ಟಿಸಿದ್ದಾರೆ.
#WATCH | Bihar: Protesting against #AgnipathRecruitmentScheme, agitators vandalise Lakhminia Railway Station and block railway tracks here. pic.twitter.com/H7BHAm8UIg
— ANI (@ANI) June 17, 2022
ಜಿಲ್ಲೆಯು ಇದೇ ರೀತಿಯ ಕೋಲಾಹಲಕ್ಕೆ ಸಾಕ್ಷಿಯಾಯಿತು. ಕೇಂದ್ರ ಸರ್ಕಾರದ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನಾಕಾರರು ಜಂಟಿಯಾಗಿ ಮೆರವಣಿಗೆ ನಡೆಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
ಉತ್ತರ ಪ್ರದೇಶದ ಬಲಿಯಾದಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಇದೇ ರೀತಿಯ ಪ್ರತಿಭಟನೆ ನಡೆಯುತ್ತಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.