ರಾಜಸ್ಥಾನ್ CM ಅಶೋಕ್ ಗೆಹ್ಲೋಟ್ ಸಹೋದರನ ಮನೆ ಮೇಲೆ ಸಿಬಿಐ ದಾಳಿ……
ರಾಜಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧ್‌ಪುರ ನಿವಾಸ ಮತ್ತು ಅಂಗಡಿ ಮೇಲೆ ಸಿಬಿಐ ದಾಳಿ ನಡೆಸಿದೆ.
ಅಗ್ರಸೇನ್ ಗೆಹ್ಲೋಟ್ ಅವರು ರಸಗೊಬ್ಬರ ವ್ಯಾಪಾರಿಗಳಾಗಿದ್ದು, ರಸಗೊಬ್ಬರ ತಯಾರಿಸಲು ಅಗತ್ಯವಿರುವ ಪೊಟ್ಯಾಷ್ ಅನ್ನು ರೈತರಿಗೆ ವಿತರಿಸುವ ಹೆಸರಿನಲ್ಲಿ ಸರ್ಕಾರದಿಂದ ಸಬ್ಸಿಡಿ ಮೇಲೆ ಖರೀದಿಸಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಗ್ರಸೇನ್ ಗೆಹ್ಲೋಟ್ 2007 ಮತ್ತು 2009 ರ ನಡುವೆ ಸಬ್ಸಿಡಿ ರಸಗೊಬ್ಬರವನ್ನು ರಫ್ತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯದಲ್ಲಿಯೂ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಕಸ್ಟಮ್ಸ್ ಇಲಾಖೆಯು ಅಗ್ರಸೇನ್ ಕಂಪನಿಗೆ ಸುಮಾರು 5.46 ಕೋಟಿ ರೂಪಾಯಿ ದಂಡವನ್ನೂ ವಿಧಿಸಿತ್ತು.
ಅಗ್ರಸೇನ್ ಅವರ ಮೇಲ್ಮನವಿಯ ಮೇಲೆ, ಇಡಿ ಸಂಬಂಧಿತ ಪ್ರಕರಣದಲ್ಲಿ ಅವರ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಈ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಿದೆ. ಸಬ್ಸಿಡಿ ದರದಲ್ಲಿ ಭಾರತೀಯ ರೈತರಿಗೆ ಮೀಸಲಾಗಿದ್ದ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MoP) ಅನ್ನು ವಿದೇಶಗಳಿಗೆ ವಿದೇಶಗಳಿಗೆ ರಫ್ತು ಮಾಡಿದ್ದಾರೆ ಎನ್ನಲಾಗಿದೆ.