ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ದೇಶಾದ್ಯಂತ ಹಬ್ಬಿದ ಅಗ್ನಿಪಥ್ ಜ್ವಾಲೆ – ನೇಮಕಾತಿ ವಯೋಮಿತಿ 23 ವರ್ಷಕ್ಕೆ ಹೆಚ್ಚಿಸಿದ ಕೇಂದ್ರ….  

Naveen Kumar B C by Naveen Kumar B C
June 17, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ದೇಶಾದ್ಯಂತ ಹಬ್ಬಿದ ಅಗ್ನಿಪಥ್ ಜ್ವಾಲೆ –   ನೇಮಕಾತಿ ವಯೋಮಿತಿ 23 ವರ್ಷಕ್ಕೆ ಹೆಚ್ಚಿಸಿದ ಕೇಂದ್ರ….

ರಕ್ಷಣಾ ಇಲಾಖೆಯ ಅಗ್ನಿಪಥ ಯೋಜನೆಯ ವಿರೋಧದ  ಬೆಂಕಿ ದೇಶಾದ್ಯಂತ  ವ್ಯಾಪಿಸಿದೆ.  ಯುಪಿ-ಬಿಹಾರ ಮತ್ತು ಹರಿಯಾಣದಿಂದ ತೆಲಂಗಾಣದವರೆಗೆ  ಪ್ರತಿಭಟನೆ, ಹಿಂಸೆ, ಗಲಭೆಗಳು ಜರುಗಿವೆ.

ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇಶಾದ್ಯಂತ ಸುಮಾರು 200 ರೈಲುಗಳ ಮೇಲೆ ಪ್ರತಿಭಟನಾಕಾರ ಕೆಂಗಣ್ಣು ಬಿದ್ದಿದೆ.  ತೆಲಂಗಾಣ ಮತ್ತು ಬಿಹಾರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

Related posts

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

March 5, 2026
ಯುದ್ಧ ಭೀತಿ ನಡುವೆ ಷೇರು ಮಾರುಕಟ್ಟೆ ಭಾರೀ ಕುಸಿತ; ರೂಪಾಯಿ ಸಾರ್ವಕಾಲಿಕ ಕನಿಷ್ಠ

ಯುದ್ಧ ಭೀತಿ ನಡುವೆ ಷೇರು ಮಾರುಕಟ್ಟೆ ಭಾರೀ ಕುಸಿತ; ರೂಪಾಯಿ ಸಾರ್ವಕಾಲಿಕ ಕನಿಷ್ಠ

March 5, 2026

ಇದರ ಮಧ್ಯೆಯೇ  ಸೇನೆ ಮತ್ತು ವಾಯುಪಡೆಯಿಂದ ಮಹತ್ವದ  ಹೇಳಿಕೆ ನೀಡಿದ್ದು,  ಎರಡು ದಿನಗಳಲ್ಲಿ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ,  ಜೂನ್ 24 ರಿಂದ ವಾಯುಪಡೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಬಿಹಾರದ ಬೇಗುಸರೈ,  ಲಖಿಸರಾಯ್  ಜಿಲ್ಲೆಗಳಲ್ಲಿ  ಉದ್ರಿಕ್ತ ಯುವಕರ ಗುಂಪು  ರಸ್ತೆ ತಡೆ ನಡೆಸುತ್ತಿದ್ದಾರೆ.  ಯುವಕರು ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರಿಂದ  ರೈಲುಗಳ ಸಂಚಾದಲ್ಲಿ ವ್ಯತ್ಯಯ ಉಂಟಾಗಿದೆ.   ಬೇಗುಸರೈ ಜಿಲ್ಲೆಯ ಸಾಹೇಬ್‌ಪುರ್‌ಕಮಲ್ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿ ಭಾರೀ ಗಲಾಟೆ ಸೃಷ್ಟಿಸಿದ್ದಾರೆ.

ಹೊಸ ಸೇನಾ ನೇಮಕಾತಿ ಯೋಜನೆಗೆ ಉತ್ತರ ಭಾರತದ ಹಲವೆಡೆ ವಿರೋಧ ವ್ಯಕ್ತವಾಗಿದ್ದರಿಂದ ಹಿನ್ನಡೆಯನ್ನ ಅನುಭವಿಸುತ್ತಿದೆ.  ಹಾಗಾಗಿ ಕೇಂದ್ರ ಸರ್ಕಾರ ಅಗ್ನಿವೀರರನ್ನ ನೇಮಿಸಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.

ಸ್ತುತ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿರುವ ಸರ್ಕಾರವು ಗರಿಷ್ಟವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಕ್ಕೆ ಏರಿಕೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಸೇನಾ ನೇಮಕಾತಿ ನಡೆದಿಲ್ಲದಿರುವುದರಿಂದ ಈ ಒಂದು ಬಾರಿ ಗರಿಷ್ಟ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.

ಈ ಕುರಿತು ಪಿಐಬಿ ಟ್ವೀಟ್‌ ಮಾಡಿದ್ದು “2022ರ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು 2022 ಕ್ಕೆ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ.” ಎಂದು ಟ್ವೀಟ್‌ ಮಾಡಿದೆ.

ಜೂನ್ 14 ರಂದು, ಕೇಂದ್ರ ಸಚಿವ ಸಂಪುಟವು ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಆಕರ್ಷಕ ನೇಮಕಾತಿ ಯೋಜನೆಯನ್ನು ಅನುಮೋದಿಸಿತು. ಈ ಯೋಜನೆಯನ್ನು ಅಗ್ನಿಪಥ್ ಎಂದು ಕರೆಯಲಾಗುತ್ತದೆ ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.

Tags: agnipath schemebiharRajasthanup
ShareTweetSendShare
Join us on:

Related Posts

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

ಯುದ್ಧ ಭೀತಿ ನಡುವೆ ಷೇರು ಮಾರುಕಟ್ಟೆ ಭಾರೀ ಕುಸಿತ; ರೂಪಾಯಿ ಸಾರ್ವಕಾಲಿಕ ಕನಿಷ್ಠ

ಯುದ್ಧ ಭೀತಿ ನಡುವೆ ಷೇರು ಮಾರುಕಟ್ಟೆ ಭಾರೀ ಕುಸಿತ; ರೂಪಾಯಿ ಸಾರ್ವಕಾಲಿಕ ಕನಿಷ್ಠ

by Shwetha
March 5, 2026
0

ಇರಾನ್–ಅಮೆರಿಕಾ ಹಾಗೂ ಇಸ್ರೇಲ್ ನಡುವಿನ ಸಂಘರ್ಷದ ಆತಂಕದ ನಡುವೆ ದೇಶೀಯ ಷೇರು ಮಾರುಕಟ್ಟೆಗಳು ಭಾರೀ ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಜಾಗತಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲ ಬೆಲೆ...

ಅಮೆರಿಕದ ಅತಿದೊಡ್ಡ ರಾಡಾರ್ ನಾಶ?  ಭಾರೀ ನಷ್ಟವೆಂದು ಇರಾನ್ ಹೇಳಿಕೆ

ಅಮೆರಿಕದ ಅತಿದೊಡ್ಡ ರಾಡಾರ್ ನಾಶ? ಭಾರೀ ನಷ್ಟವೆಂದು ಇರಾನ್ ಹೇಳಿಕೆ

by Shwetha
March 5, 2026
0

ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಹೊಸ ಬೆಳವಣಿಗೆ ಹೊರಬಿದ್ದಿದೆ. ಅಮೆರಿಕದ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ನಾಶಗೊಂಡಿದೆ ಎಂದು ಇರಾನ್ ಹೇಳಿಕೊಂಡಿದೆ. ಇರಾನ್‌ನ...

ಕೆಪಿಎಸ್‌ಸಿ ಇತಿಹಾಸದಲ್ಲೇ ನಿದರ್ಶನವಿಲ್ಲದ ಫಲಿತಾಂಶ: ಒಂದೇ ಕೊಠಡಿಯ 10 ಅಭ್ಯರ್ಥಿಗಳು ಪಾಸ್! ಇದು ಪವಾಡವೋ ಅಥವಾ ಪಕ್ಕಾ ಅಕ್ರಮವೋ?

ಕೆಪಿಎಸ್‌ಸಿ ಇತಿಹಾಸದಲ್ಲೇ ನಿದರ್ಶನವಿಲ್ಲದ ಫಲಿತಾಂಶ: ಒಂದೇ ಕೊಠಡಿಯ 10 ಅಭ್ಯರ್ಥಿಗಳು ಪಾಸ್! ಇದು ಪವಾಡವೋ ಅಥವಾ ಪಕ್ಕಾ ಅಕ್ರಮವೋ?

by Shwetha
March 5, 2026
0

ಬೆಂಗಳೂರು: ರಾಜ್ಯದ ಲಕ್ಷಾಂತರ ಯುವಜನರ ಪಾಲಿನ ಆಶಾಕಿರಣವಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಅರ್ಹರಿಗೆ ಉದ್ಯೋಗ ನೀಡಬೇಕಾದ ಸಂಸ್ಥೆ ಇದೀಗ ಅನುಮಾನಗಳ ಹುತ್ತವಾಗಿ...

ರಣರಂಗದಿಂದ ಓಡಿ ಹೋದರಾ ರಾಕಿಂಗ್ ಸ್ಟಾರ್ ಯಶ್ ಪಬ್ಲಿಸಿಟಿ ಗಿಮಿಕ್ ಎಂದು ಜರಿದ ಕೆಆರ್ಕೆ ಟಾಕ್ಸಿಕ್ ರಿಲೀಸ್ ಡೇಟ್ ಬಗ್ಗೆ ಎದ್ದಿದೆ ದೊಡ್ಡ ಗದ್ದಲ

ರಣರಂಗದಿಂದ ಓಡಿ ಹೋದರಾ ರಾಕಿಂಗ್ ಸ್ಟಾರ್ ಯಶ್ ಪಬ್ಲಿಸಿಟಿ ಗಿಮಿಕ್ ಎಂದು ಜರಿದ ಕೆಆರ್ಕೆ ಟಾಕ್ಸಿಕ್ ರಿಲೀಸ್ ಡೇಟ್ ಬಗ್ಗೆ ಎದ್ದಿದೆ ದೊಡ್ಡ ಗದ್ದಲ

by Shwetha
March 5, 2026
0

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ಳುತ್ತಿದೆ. ಕೆಜಿಎಫ್ ಸರಣಿಯ ಅಬ್ಬರದ ನಂತರ ಇಡೀ ಭಾರತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram