12ನೇ ತರಗತಿ ಪಠ್ಯ ಪರಿಷ್ಕರಣೆ ವೇಳೆ ಗುಜರಾತ್ ನಲ್ಲಿನ 2002ರ ಗಲಭೆ , ನಕ್ಸಲ್ ಚಳವಳಿ, ಮೊಘಲ್ ಕೋರ್ಟ್ , ತುರ್ತು ಪರಿಸ್ಥಿತಿಗೆ ಸಂಬಂಧಿತ ವಿಚಾರಗಳನ್ನ ಪಠ್ಯದಿಂದ NCERT ಕೈ ಬಿಟ್ಟಿದೆ..
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಹೀಗೆ ಆಯ್ದ ಪಠ್ಯಗಳನ್ನು ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.. ಅವು ಅಪ್ರಸ್ತುತ ಅಥವ ಪುನರಾವರ್ತನೆ ಆಗಲಿವೆ ಎಂದು ಪಠ್ಯದಿಂದ ಕೈ ಬಿಟ್ಟಿದಕ್ಕೆ ಕಾರಣ ನೀಡಲಾಗಿದೆ..
12ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಪಠ್ಯಪುಸ್ತಕದಿಂದ ಗುಜರಾತ್ ಗಲಭೆಗೆ ಸಂಬಂಧಿಸಿದ ವಿಷಯವನ್ನು ಭಾರತ ರಾಜಕಾರಣದ ಈಚಿನ ಬೆಳವಣಿಗೆಗಳು ಪಠ್ಯದಿಂದ ಕೈಬಿಡಲಾಗಿದೆ.
ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ರಾಜಧರ್ಮ ಕುರಿತ ಹೇಳಿಕೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿಯ ಉಲ್ಲೇಖವು ಈ ಅಡಕದಲ್ಲಿ ಇತ್ತು.
ಹಾಗೆಯೇ ಮೊಘಲ್ ಕೋರ್ಟ್ ಪಠ್ಯವನ್ನು ಇತಿಹಾಸ ಪಠ್ಯ ಪುಸ್ತಕದಿಂದ, ದಲಿತ ಚಳವಳಿ ಕುರಿತ ಕವನವನ್ನು ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
10ನೇ ತರಗತಿ ಪಠ್ಯಪುಸ್ತಕದಿಂದ ಕವಿ ಫೈಜ್ ಅಹಮ್ಮದ್ ಫೈಜ್ ಅವರ ಚರಣಗಳನ್ನು ಧರ್ಮ ಕೋಮುವಾದ ಮತ್ತು ರಾಜಕಾರಣ ವಿಷಯ ಕುರಿತ ಪಾಠವನ್ನು ಪ್ರಜಾಸತ್ತಾತ್ಮಕ ರಾಜಕಾರಣ–2 ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
7- 8 ನೇ ತರಗತಿ ಪಠ್ಯಪುಸ್ತಕದಿಂದ ದಲಿತ ಲೇಖಕ ಓಂಪ್ರಕಾಶ್ ವಾಲ್ಮೀಕಿ ಅವರನ್ನು ಕುರಿತ ಉಲ್ಲೇಖ ಹಾಗೂ ಏಳನೆ ತರಗತಿಯ ಪಠ್ಯಪುಸ್ತಕದಿಂದ ನಮ್ಮ ಹಿನ್ನೆಲೆ–2 ಪಠ್ಯದಲ್ಲಿ ಅರಸರು : ಪ್ರಮುಖ ಅಭಿಯಾನ ಮತ್ತು ಘಟನೆಗಳು ಕುರಿತ ಅಂಶ ಕೈಬಿಡಲಾಗಿದೆ.