ಬೆಳಗಾವಿ : ಬೆಳಗಾವಿಯಲ್ಲಿ PWD ಅಧೀಕ್ಷಕ ಇಂಜಿನಿಯರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ನಸುಕಿನ ಜಾವ ಮೂರು ಗಂಟೆಯವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ..
ಬೆಳಗ್ಗೆ 3 ಗಂಟೆಯವರೆಗೂ ಪರಿಶೀಲನೆ ನಡೆಸಲಾಗಿದೆ.. ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ರ, ಚಿನ್ನಾಭರಣ ಜಪ್ತಿ ಮಾಡಿದ್ಧಾರೆ..
ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ ನಾಲ್ಕು ಎಕರೆ ಕೃಷಿ ಜಮೀನು, ಖಾನಾಪುರದಲ್ಲಿ ನಾಲ್ಕು ಎಕರೆ ಕೃಷಿ ಜಮೀನು , ಮಕ್ಕಳ ಹೆಸರಲ್ಲಿ ನಿಪ್ಪಾಣಿಯಲ್ಲಿ ಏಳು ಎಕರೆ ಜಮೀನು , ಒಟ್ಟಾರೆ ಬೆಳಗಾವಿ ಜಿಲ್ಲೆಯ ವಿವಿಧೆಡೆ 22 ಎಕರೆ 12 ಗುಂಟೆ ಕೃಷಿ ಜಮೀನು ಹೊಂದಿರುವುದು ಕಂಡುಬಂದಿದೆ..
ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಒಂದು ಮನೆ, ನಿಪ್ಪಾಣಿಯ ಶಿವಾಜಿ ನಗರದಲ್ಲಿ ಒಂದು ಮನೆ, ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಎರಡು ಖಾಲಿ ನಿವೇಶನಗಳು ನಿಪ್ಪಾಣಿಯಲ್ಲಿ ಒಂದು ನಿರ್ಮಾಣ ಹಂತದ ಪೆಟ್ರೋಲ್ ಬಂಕ್ , ನಿಪ್ಪಾಣಿ ತಾಲೂಕಿನ ಬೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣಗಳು , 900 ಗ್ರಾಂ ಚಿನ್ನಾಭರಣ, 300 ಗ್ರಾಮ ಬೆಳ್ಳಿ ಆಭರಣ, ವಿವಿಧ ಕಂಪನಿಯ 3 ದ್ವಿಚಕ್ರವಾಹನ, 2 ಕಾರುಗಳು , 8.50 ಲಕ್ಷ ರೂ. ನಗದು, 2 ವಿಮಾ ಪಾಲಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳು , 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ..








