Bhuvneshwar Kumar | ಭುವನೇಶ್ವರ್ ಕುಮಾರ್ ಖಾತೆಯಲ್ಲಿ ಅಪರೂಪದ ದಾಖಲೆ
ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮತ್ತೊಂದು ಅಪರೂಪದ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಭುವನೇಶ್ವರ್, ತಮ್ಮ 10 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 4 ಬಾರಿ ಯಾವುದೇ ವೇಗಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ.

ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಈ ಹಿಂದೆ ಮೂರು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-2 ರಿಂದ ಡ್ರಾ ಮಾಡಿಕೊಂಡಿದೆ.
ಸರಣಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿ ಕಾಣಿಸಿಕೊಂಡ ಭುವಿ ಪವರ್ ಪ್ಲೇನಲ್ಲಿ ಮಿಂಚು ಹರಿಸಿದರು. ಅವರು 6.05 ರ ಎಕನಾಮಿವೊಂದಿಗೆ ನಾಲ್ಕು ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಪಡೆದರು.
ಇನ್ನು ಹರ್ಷಲ್ ಪಟೇಲ್ (7) ಟೀಂ ಇಂಡಿಯಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.








