ಕಾಲೇಜು ಪ್ರಾಂಶುಪಾಲರಿಗೆ JDS MLA ಶ್ರೀನಿವಾಸ್ ಕಪಾಳ ಮೋಕ್ಷ..
ಮಂಡ್ಯ – ಮಂಡ್ಯದ ಐಟಿಐ ಕಾಲೇಜಿನ ಪ್ರಾಂಶುಪಾಲರ ಮೇಲೆ ಜೆಡಿಎಸ್ ಶಾಸಕ ಶ್ರೀನಿವಾಸ್ ಕಪಾಳ ಮೋಕ್ಷ ಮಾಡಿರುವ ವೀಡಿಯೋ ವೈರಲ್ ಆಗಿದೆ.
ಮಂಡ್ಯದ ಐಟಿಐ ಕಾಲೇಜಿನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗಾನಂದ್ ಮೇಲೆ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಕೈ ಮಾಡಿ ದರ್ಪ ಮೆರೆದಿದ್ದಾರೆ.
ಕಾರ್ಯಕ್ರದ ವೇಳೆ ಸರಿಯಾದ ಮಾಹಿತಿ ನೀಡಲು ತಡಮಾಡಿದ್ದಕ್ಕೆ ಮತ್ತು ಕಾಲೇಜಿನ ಮೂಲಭೂತ ಸೌಕರ್ಯ ಸರಿಯಾಗಿ ಇಲ್ಲ ಎಂಬ ಕಾರಣಕ್ಕೆ ಶಾಸಕ ಪ್ರಿನ್ಸಿಪಲ್‌ಗೆ 2 ಬಾರಿ ಹೊಡೆದಿದ್ದಾರೆ. ಶಾಸಕ ಶ್ರೀನಿವಾಸ್ ವರ್ತನೆಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
mandya mla slaps on government iti college principal