Bangalore | ಆಮ್ ಆದ್ಮಿ ಪಕ್ಷದ ಬೆಂಗಳೂರು ಆಟೋ ಘಟಕದ ಅಧ್ಯಕ್ಷ ವೆಂಕಟೇಗೌಡ ನಿಧನ
ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಆಟೋ ಘಟಕದ ಅಧ್ಯಕ್ಷ ವೆಂಕಟೇಗೌಡ ತೀವ್ರ ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಆಟೋ ಚಾಲಕರ ಅನೇಕ ಸಮಸ್ಯೆಗಳ ಬಗ್ಗೆ ಸಾಕಷ್ಟು ಹೋರಾಟಗಳನ್ನು ಆಮ್ ಆದ್ಮಿ ಪಕ್ಷದ ವತಿಯಿಂದ ಮಾಡಿಕೊಂಡು ಬಂದಿದ್ದ ವೆಂಕಟೇಗೌಡರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಧ್ಯಕ್ಷರು ಸಹ ಆಗಿದ್ದರು.
ಚಾಲಕರ ಚಾಲನಾ ಪರವಾನಗಿ ಗಾಗಿ ಕೇಂದ್ರ ಸರ್ಕಾರ ಎಂಟನೇ ಕ್ಲಾಸ್ ಪಾಸಾಗಬೇಕೆಂಬ ಕಾನೂನಿನ ವಿರುದ್ಧ ಸಾಕಷ್ಟು ಹೋರಾಟವನ್ನು ಮಾಡಿ ಬೆಂಗಳೂರಿಗೆ ಆಮ್ ಆದ್ಮಿ ಪಕ್ಷದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರನ್ನು ಕರೆಸಿ ಆಟೊ ಚಾಲಕರ ಬೃಹತ್ ಸಭೆಯನ್ನು ಏರ್ಪಡಿಸಿದೆ ಇತಿಹಾಸ ಗೌಡರದ್ದು.
ಆಟೋ ಚಾಲಕರ ಪರ್ಮಿಟ್ ವಿಚಾರದಲ್ಲಿ , ಸರ್ಕಾರದ ನಿವೇಶನಗಳ ಹಂಚಿಕೆಯಲ್ಲಿ ಆಟೋ ಚಾಲಕರಿಗೆ ಮೀಸಲಾತಿಗಾಗಿ ಒತ್ತಾಯಿಸಿ, ಇತ್ತೀಚಿನ ರ್ಯಾಪಿಡೋ ಕಂಪೆನಿಯ ಅನಧಿಕೃತ ಕಾರ್ಯಾಚರಣೆ ವಿರುದ್ಧ ಆಟೊ ಚಾಲಕರು ಗಳನ್ನು ಸಂಘಟಿಸಿ ಅನೇಕ ಹೋರಾಟಗಳನ್ನು ಮಾಡಿದ ವೆಂಕಟೇಗೌಡರ ಸಾವು ಸಾಕಷ್ಟು ನೋವನ್ನು ತಂದಿದೆ ಎಂದು ಅನೇಕ ಆಟೋ ಚಾಲಕರು ಗಳ ಯೂನಿಯನ್ ಗಳ ಮುಖ್ಯಸ್ಥರು ಸಂತಾಪವನ್ನು ಸೂಚಿಸಿದ್ದಾರೆ.