Sanjay Manjrekar | ಟೀಂ ಇಂಡಿಯಾಗೆ ಆ ಆಟಗಾರನ ಅವಕಾಶವಿದೆ
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ದೀಪಕ್ ಹೂಡಾ ಅವರನ್ನು ಆಯ್ಕೆ ಮಾಡಿರುವುದು ಉತ್ತಮ ನಿರ್ಧಾರ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಕೆಳ ಕ್ರಮಾಂಕದಲ್ಲಿ ಭಾರತಕ್ಕೆ ಈಗ ಹೂಡಾ ಅವರಂತಹ ಆಟಗಾರನ ಅಗತ್ಯವಿದೆ ಎಂದು ಹೇಳಿದರು.
ಸುದೀರ್ಘ ಕಾಯುವಿಕೆಯ ನಂತರ, ದೀಪಕ್ ಹೂಡಾ ಈ ವರ್ಷದ ಫೆಬ್ರವರಿಯಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರು.
ಐಪಿಎಲ್-2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಆಲ್ ರೌಂಡರ್ 14 ಇನ್ನಿಂಗ್ಸ್‌ಗಳಲ್ಲಿ 451 ರನ್‌ಗಳನ್ನು ಸಿಡಿಸಿದ್ದರು. ಹೀಗಾಗಿ ಮತ್ತೆ ಟೀ ಇಂಡಿಯಾಗೆ ಆಯ್ಕೆ ಆಗಿದ್ದಾರೆ.
ಈ ಬಗ್ಗೆ ಸಂಜಯ್ ಮಂಜ್ರೇಕರ್ ಮಾತನಾಡಿದ್ದು,.. “ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೂಡಾ ಮಿಂಚುತ್ತಾರೆ ಎಂದು ನಾನು ಭಾವಿಸುತ್ತೇನೆ.
ದೀಪಕ್ ಹೂಡಾ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಸಾಮರ್ಥ್ಯ ಏನೆಂದು ಸಾಬೀತುಪಡಿಸಿದ್ದಾರೆ. ವಾಸ್ತವವಾಗಿ ಕೆಳ ಕ್ರಮಾಂಕದಲ್ಲಿ ಬಂದು ಪ್ರಭಾವಿ ಪ್ರದರ್ಶನ ನೀಡುವುದು ಕಷ್ಟ.
ಆದರೆ, ಹೂಡಾ ಐಪಿಎಲ್‌ನಲ್ಲಿ ಈ ಕಠಿಣ ಕೆಲಸವನ್ನು ಬಹಳ ಸುಲಭವಾಗಿ ಮಾಡಿದರು. ಅಂತಹ ಆಟಗಾರನ ಅವಶ್ಯಕತೆ ಈಗ ಟೀಂ ಇಂಡಿಯಾಗೆ ಇದೆ.
ಅವರು ಐಪಿಎಲ್‌ನಲ್ಲಿ ಮಾತ್ರವಲ್ಲದೆ ಭಾರತದ ಪರವಾಗಿಯೂ ಮಿಂಚಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಟಿ20 ಪಂದ್ಯಗಳು ಜೂನ್ 26 ಮತ್ತು 28 ರಂದು ನಡೆಯಲಿವೆ.