Belgavi | 3.5 ಕೆಜಿ ಚಿನ್ನಾಭರಣ ಕಳ್ಳತನ ಕೇಸ್: ನಾಲ್ವರು ಅರೆಸ್ಟ್
ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿನ ಮಹಾಲಕ್ಷ್ಮಿ ಸೊಸೈಟಿಯಲ್ಲಿ 3.5 ಕೆ.ಜಿ.ಚಿನ್ನಾಭರಣ ದೋಚಿದ್ದ ಕಳ್ಳರನ್ನು ಹಾರೋಗೇರಿ ಪೊಲೀಸರು ಬಂಧಿಸಿದ್ದಾರೆ.
ಇಂಡಿ ಪಟ್ಟಣದ 40 ವರ್ಷದ ಹುಸೇನ್ ಜಾತಗಾರ, ಮೂಡಲಗಿಯ 22 ವರ್ಷ ಸದ್ದಾಂ ಜಮಖಂಡಿ, 23 ವರ್ಷದ ರಿಯಾಜ್ ಪೈಲ್ವಾನ್, ಉಗಾರದ 36 ವರ್ಷದ ಹಾಜೀಸಾಬ್ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ನಾಲ್ವರು ಕಳ್ಳರು ಕಳೆದ ಮೇ 28 ರಂದು ಹಂದಿಗುಂದ ಗ್ರಾಮದಲ್ಲಿರುವ ಮಹಾಲಕ್ಷ್ಮಿ ಸೊಸೈಟಿಯಲ್ಲಿ 3.5 ಕೆಜಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು.
ಈ ಸಂಬಂಧ ಮೇ 29 ರಂದು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಖದೀಮರಿಗಾಗಿ ಬಲೆ ಬೀಸಿದ್ದ ಹಾರೋಗೇರಿ ಠಾಣಾ ಪೊಲೀಸರು ಸದ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೊತೆಗೆ 1.40 ಕೋಟಿ ಮೌಲ್ಯದ 2.8 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.