IND Vs LEIC Highlights : ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಪಂತ್ ಅರ್ಧಶತಕ
ಲಿಸ್ಟರ್ ಶೈರ್ – ಟೀಂ ಇಂಡಿಯಾ ನಡುವೆ ನಡೆಯುತ್ತಿರುವ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಅರ್ಧಶತಕ ಸಿಡಿಸಿದ್ದಾರೆ.
ಉಮೇಶ್ ಯಾದವ್ ಬೌಲಿಂಗ್ ನಲ್ಲಿ ರಿವರ್ಸ್ ಸ್ವೀಪ್ ನಲ್ಲಿ ಸೂಪರ್ ಸಿಕ್ಸರ್ ಸಿಡಿಸಿದ ಪಂತ್ 72 ಎಸೆತಗಳಲ್ಲಿ 50 ರನ್ ಗುರಿಯನ್ನು ತಲುಪಿಸಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ರಿಷಬ್ ಪಂತ್, 87 ಎಸೆತಗಳಲ್ಲಿ 14 ಬೌಂಡರಿ, ಒಂದು ಸಿಕ್ಸರ್ ಸಹಾಯದೊಂದಿಗೆ 76 ರನ್ ಗಳಿಸಿದರು.
ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ವ್ಯವಹಿಸಿದ್ದ ಪಂತ್ ಬ್ಯಾಟರ್ ಆಗಿ ದಾರುಣವಾಗಿ ವಿಫಲವಾಗಿದ್ದರು.
ಇದೀಗ ಅರ್ಧ ಶತಕ ಸಿಡಿಸಿರುವ ಪಂತ್, ಮತ್ತೆ ಫಾರ್ಮ್ ಗೆ ಬಂದಿರುವ ಸೂಚನೆ ನೀಡಿದ್ದಾರೆ.
ಮ್ಯಾಚ್ ವಿಚಾರಕ್ಕೆ ಬಂದ್ರೆ ಲಿಸ್ಟರ್ ಶೈರ್ 244 ರನ್ ಗಳಿಗೆ ಆಲೌಟ್ ಆಯ್ತು ಆಗಿತ್ತು. ಪಂತ್ 76 ರನ್ ಗಳಿಸಿದ್ದರು.