RGV ಹೆಸರು ರಾಮ್ ಗೋಪಾಲ್ ವರ್ಮಾ ಅಲ್ಲವೇ ಅಲ್ಲ..
RGV..! ರಾಮ್ ಗೋಪಾಲ್ ವರ್ಮಾ.. ಭಾರತೀಯ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ನಿರ್ದೇಶಕ. ಹಾಗೇ ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.
ಆ ವಿಚಾರ ಈ ವಿಚಾರ ಎಂಬ ಬೇದವಿಲ್ಲದೇ ಎಲ್ಲಾ ವಿಷಯಗಳ ಬಗ್ಗೆ ಟ್ವಿಟ್ಟರ್ ನಲ್ಲಿ ವ್ಯಂಗ್ಯಭರಿತವಾಗಿ ಟ್ವೀಟ್ ಮಾಡುವ ಆಗ್ಗಿಂದಾಗೆ ಸದ್ದು ಮಾಡುತ್ತಲೇ ಇರುತ್ತಾರೆ.
ಶಿವ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ನಿರ್ದೇಶಕರ ಕ್ಯಾಪ್ ತೊಟ್ಟ ರಾಮ್ ಗೋಪಾಲ್ ವರ್ಮಾ ಬಳಿಕ ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಆಕ್ಷನ್ ಕಟ್ ಹೇಳುವಷ್ಟು ಬೆಳೆದಿದ್ದು ಈಗ ಇತಿಹಾಸ.

ಮತ್ತೆ ಇದೀಗ ಸೌತ್ ಕಡೆ ಮುಖ ಮಾಡಿರುವ ರಾಮ್ ಗೋಪಾಲ್ ವರ್ಮಾ ತಮ್ಮದೇ ಅಭಿರುಚಿಯ ಸಿನಿಮಾಗಳನ್ನು ಮಾಡುತ್ತಾ ಹೊರಟ್ಟಿದ್ದಾರೆ. ಈಗಲೂ ಕೊಂಡಾ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಈ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ಒಂದು ಆಸಕ್ತಿದಾಯಕ ಮಾಹಿತಿ ನೀಡಿದ್ದಾರೆ. ಅದು ಏನೆಂದರೇ ಅವರ ಹೆಸರು ರಾಮ್ ಗೋಪಾಲ್ ವರ್ಮಾ ಅಲ್ಲವೇ ಅಲ್ಲ. ಬದಲಿಗೆ ರಾಮ್ ಪಂಡು ಅಂತೆ.
ಶಿವ ಸಿನಿಮಾ ನಿರ್ದೇಶಿಸುವಾಗ ಅವರು ರಾಮ್ ಪಂಡು ಬದಲಿಗೆ ರಾಮ್ ಗೋಪಾಲ್ ವರ್ಮಾ ಆದ್ರೂ ಎಂದು ಹೇಳಿಕೊಂಡಿದ್ದಾರೆ.








