Dinesh Karthik | ತಂಡದಲ್ಲಿ ಯಾರೇ ಇದ್ದರೂ “ಡಿಕೆ ನನ್ನ ವಿಕೆಟ್ ಕೀಪರ್”
ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಟೀಂ ಇಂಡಿಯಾ ಭಾನುವಾರ ಐರ್ಲೆಂಡ್ ವಿರುದ್ಧ ಟಿ 20 ಸರಣಿ ಆರಂಭಿಸಲಿದೆ.
ಎರಡು ಪಂದ್ಯಗಳ ಈ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿರುವ ಬಿಸಿಸಿಐ ಸೂರ್ಯ ಕುಮಾರ್ ಯಾದವ್ ಅವಕಾಶ ನೀಡಿದೆ.
ಅದೇ ರೀತಿ ಮಹಾರಾಷ್ಟ್ರದ ಬ್ಯಾಟರ್ ರಾಹುಲ್ ತ್ರಿಪಾಟಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರಿಸಿರುವ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ಐರ್ಲೆಂಡ್ ವಿಮಾನ ಹತ್ತಿ್ದಾರೆ.
ಈ ತಂಡದಲ್ಲಿ ವಿಕೆಟ್ ಕೀಪರ್ ಗಳು ಹೆಚ್ಚಾಗಿದ್ದು, ಇವರಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಪ್ರಶ್ನೆಗೆ ರೋಹನ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜು, ಇಶಾನ್, ದಿನೇಶ್ ಕಾರ್ತಿಕ್, ವಿಕೆಟ್ ಕೀಪರ್ ಗಳಾಗಿ ಈ ಮೂವರಿಗೆ ವಿಶೇಷವಾದ ಸ್ಥಾನ ಮಾನವಿದೆ.
ಆದ್ರೆ ನಾನು ಮಾತ್ರ ಸಂಜು, ಇಶಾನ್ ತಂಡದಲ್ಲಿದ್ದರೂ ದಿನೇಶ್ ಕಾರ್ತಿಕ್ ಗೆ ಕೀಪಿಂಗ್ ಗ್ಲೌಸ್ ನೀಡುತ್ತೇನೆ ಎಂದಿದ್ದಾರೆ.
ಇನ್ನು ಸೂರ್ಯ ಕುಮಾರ್ ಮತ್ತೆ ತಂಡಕ್ಕೆ ಸೇರಿಕೊಂಡಿರುವುದು ಖುಷಿಯ ವಿಚಾರ ಎಂದಿರುವ ರೋಹನ್ ಗವಾಸ್ಕರ್, ಟಿ 20 ವಿಶ್ವಕಪ್ ಭಾರತ ಕ್ರಿಕೆಟ್ ತಂಡ ಎಂದರೇ ನನಗೆ ನೆನಪಿಗೆ ಬರುವ ಹೆಸರು ಸೂರ್ಯ ಕುಮಾರ್ ಯಾದವ್. ಯಾಕೆಂದರೇ ಆತ ವಿಲಕ್ಷಣ ಆಟಗಾರ, ಅದ್ಭುತ ಕ್ರಿಕೆಟರ್ ಎಂದಿದ್ದಾರೆ.