India-vs-Ireland | ಐರ್ಲೆಂಡ್ – ಟೀಂ ಇಂಡಿಯಾ ಮ್ಯಾಚ್ : ಹೆಡ್ ಟು ಹೆಡ್ ರೆಕಾರ್ಡ್
ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧದ ಟಿ 20 ಸರಣಿಯ ಭಾಗವಾಗಿ ಮೊದಲ ಪಂದ್ಯವನ್ನಾಡಲಿದೆ.
ಡಬ್ಲಿನ್ ವೇದಿಕೆಯಾಗಿ ನಡೆಯಲಿರುವ ಈ ಸರಣಿಯ ಎರಡು ಪಂದ್ಯಗಳು ಭಾರತದ ಕಾಲ ಮಾನದ ಪ್ರಕಾರ ರಾತ್ರಿ 9 ಗಂಟೆಗೆ ಪ್ರಾರಂಭವಾಗಲಿದೆ.
ಚುಟುಕು ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ – ಐರ್ಲೆಂಡ್ ಹೆಡ್ ಟು ಹೆಡ್ ರಿಕಾರ್ಡ್ ನೋಡೋದಾದ್ರೆ ಈ ಎರಡು ತಂಡಗಳು ಮೂರು ಬಾರಿ ಮುಖಾಮುಖಾಗಿದ್ದು,ಮೂರು ಬಾರಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಉಭಯ ತಂಡಗಳು ಮೊದಲು ಐಸಿಸಿ ಟಿ 20 ವಿಶ್ವಕಪ್ 2009ರಲ್ಲಿ ಮುಖಾಮುಖಿಯಾಗಿದ್ದವು. ಆಗ ಟೀಂ ಇಂಡಿಯಾ ಎಂಟು ವಿಕೆಟ್ ಗಳಿಂದ ಜಯ ಸಾಧಿಸಿತ್ತು.
18 ಓವರ್ ಗಳಿಗೆ ಸೀಮಿತ ಆಗಿದ್ದ ಅಂದಿನ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಎಂಟು ವಿಕಟ್ ಗಳ ನಷ್ಟಕ್ಕೆ 112 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 15 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಜಹೀರ್ ಖಾನ್ ಮ್ಯಾಚ್ ಆಫ್ ದಿ ಮ್ಯಾಚ್ ಆದ್ರೆ, ರೋಹಿತ್ ಶರ್ಮಾ 52 ರನ್ ಗಳಿಸಿದ್ದತು.
ಇನ್ನು ಎರಡು ತಂಡಗಳ ನಡುವೆ ಕೊನೆಯದಾಗಿ 2018 ರಲ್ಲಿ ಡಬ್ಲಿನ್ ವೇದಿಕೆಯಾಗಿ ಪಂದ್ಯ ನಡೆದಿತ್ತು. ಆಗಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಐದು ವಿಕಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ 132 ರನ್ ಗಳಿಸಲಷ್ಟೇ ಶಕ್ತವಾಯ್ತು.
ಈ ಮ್ಯಾಚ್ ನಲ್ಲಿ ರೋಹಿತ್ ಶರ್ಮಾ 97 ರನ್, ಶಿಖರ್ ಧವನ್ 74 ರನ್ ಗಳಿಸಿತ್ತು. ಕುಲ್ ದೀಪ್ ಯಾದವ್ ನಾಲ್ಕು, ಚಹಾಲ್ ಮೂರು ವಿಕೆಟ್ ಪಡೆದಿದ್ದರು.
ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಖಾರ್, ಅಕ್ಷರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಯಜುವೇಂದ್ರ ಚಹಾಲ್, ರವಿ ಬಿಷ್ಣೋಯ್.
ಐರ್ಲೆಂಡ್: ಆಂಡ್ರ್ಯೂ ಬಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಗರೆಥ್ ಡೈಲನ್, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕಂಫರ್, ಸ್ಟೀಫನ್ ದೋಹ್ನಿ, ಲೋರ್ಕನ್ ಟಕರ್, ಮಾರ್ಕ್ ಅಡೆರ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್ ಬ್ಯಾರಿ, ಆಂಡ್ರ್ಯೂ ಬರ್ನಿ, ಆಂಡಿ.