Umesh katti | ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು
ಕಲಬುರಗಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವ ಮತ್ತೆ ಪ್ರತ್ಯೇಕ ರಾಜ್ಯದ ಕಿಡಿ ಹೊತ್ತಿಸಿದ್ದಾರೆ.
ಆಗ್ಗಿಂದಾಗೆ ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಮಾತನಾಡುವ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಈಗಲೂ ಹೇಳ್ತೇನೆ..
ಅಬಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಆಗಬೇಕು ಇದು ನಿಜ ಎಂದಿದ್ದಾರೆ.
ಕಲಬುರಗಿಯ ಚಿಂಚೋಳಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಸಿದ್ರಾಮಯ್ಯ ಅವಧಿಯಲ್ಲಿ ಒಂದೇ ರಾಜ್ಯದಲ್ಲಿ ತಾರತಮ್ಯ ಆಗಿದೆ.
ಪರಿಹಾರ ನೀಡುವಲ್ಲಿ ಆ ಭಾಗ ಈ ಭಾಗಕ್ಕೆ ತಾರತಮ್ಯ ಆಗಿದೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ 50 ರಾಜ್ಯಗಳು ಆಗುವ ವೇಳೆ ಉತ್ತರ ಕರ್ನಾಟಕವೂ ಆಗಲಿ. ನಾನು ಅಖಂಡ ರಾಜ್ಯಕ್ಕೆ ಸಿಎಂ ಆಗಬೇಕು ಅನ್ನೋನು.
ಒಟ್ಟು 224 ಶಾಸಕರ ಪೈಕಿ ನಾನೇ ಅತ್ಯಂತ ಹಿರಿಯ ಸದಸ್ಯ. ಉತ್ತರ ಕರ್ನಾಟಕಕ್ಕೆ ನನ್ನ ಮಗ ಬೇಕಿದ್ದರೆ ಮುಖ್ಯಮಂತ್ರಿ ಆಗಲಿ ಎಂದು ಸಿಎಂ ಆಗುವ ಆಸೆಯನ್ನು ಉಮೇಶ್ ಕತ್ತಿ ಹೊರಹಾಕಿದ್ದಾರೆ.