ಪಠ್ಯ ಪರಿಷ್ಕರಣೆ | ನಾಡಗೀತೆಗೆ ಅಪಮಾನ ಮಾಡಿದವರ ನೇಮಿಸಿದ್ದು ಸರಿಯಲ್ಲ
ಬೆಂಗಳೂರು : ಪಠ್ಯ ಪುಸ್ತಕ ಸಮಿತಿಗೆ ಯಾರನ್ನಾದರೂ ನೇಮಿಸುವಾಗ ಯೋಚನೆ ಮಾಡಿ ತೀರ್ಮಾನ ಮಾಡಬೇಕು.
ಸಾಮಾಜಿಕ ಜಾಲತಾಣದಲ್ಲಿ ನಾಡಗೀತೆಗೆ ಅಪಮಾನ ಮಾಡಿದವರ ನೇಮಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸರ್ಕಾರದ ವಿರುದ್ಧ ನಂಜವಧೂತ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೆಂಪೇಗೌಡರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಗಳು, ಪಠ್ಯ ಪರಿಷ್ಕರಣೆ ವೇಳೆ ಕುವೆಂಪು, ಅಂಬೇಡ್ಕರ್, ಬಸವೇಶ್ವರನಿಗೆ ಅವಮಾನ ಮಾಡಲಾಗಿದೆ.
ಪಠ್ಯ ಪುಸ್ತಕ ಸಮಿತಿಗೆ ಯಾರನ್ನಾದರೂ ನೇಮಿಸುವಾಗ ಯೋಚನೆ ಮಾಡಿ ತೀರ್ಮಾನ ಮಾಡಬೇಕು.

ಬಹಳ ವಿಶಾಲವಾದ ಅಧ್ಯಯನ ಮಾಡುವವರ ನೇಮಕ ಮಾಡಬೇಕು. ಲೆಫ್ಟ್ ರೈಟ್ ಇಲ್ಲದ, ಸ್ಟ್ರೈಟ್ ಮನಸ್ಥಿತಿ ಇರೋರನ್ನು ಸಮಿತಿಯ ಅಧ್ಯಕ್ಷರಾನ್ನಾಗಿ ಮಾಡಬೇಕು.
ಸಾಮಾಜಿಕ ಜಾಲತಾಣದಲ್ಲಿ ನಾಡಗೀತೆಗೆ ಅಪಮಾನ ಮಾಡಿದವರ ನೇಮಿಸಿದ್ದು ಸರಿಯಲ್ಲ ಎಂದು ಸಿಎಂ ಎದುರೇ ಸರ್ಕಾರದ ನಡೆಗೆ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ನೀರಾವರಿಗೆ ಕೊಡುಗೆ ಕೊಟ್ಟವರಲ್ಲಿ ಬಸವರಾಜ್ ಬೊಮ್ಮಾಯಿ ಒಬ್ಬರು. ಅವರು ನೀರಾವರಿ ಸಚಿವಾಗಿದ್ದಾಗ ನೀರಾವರಿ ಬಗ್ಗೆ ಅಧ್ಯಯನ ಮಾಡಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ.
ಮೇಕೆದಾಟು ಯೋಜನೆ ಅನುಷ್ಠಾನ ಮಾಡೇ ತೀರುವ ಭರವಸೆ ಸಿಎಂ ನೀಡಿದ್ದಾರೆ. ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ನಂತರ ಒಕ್ಕಲಿಗರ ಅಭಿವೃದ್ಧಿ ನಿಗಮ ಮಾಡಿದ್ದಾರೆ.
ಆದರೆ ಆ ನಿಗಮ ಸರಿಯಾಗಿ ಟೀಕ್ ಆಫ್ ಆಗಿಲ್ಲ. ಹೀಗೆ ಸಿಎಂ ನೇತೃತ್ವದಲ್ಲಿ ಒಂದು ರಿವ್ಯೂ ಮೀಟಿಂಗ್ ಆಗಬೇಕು ಎಂದು ಮನವಿ ಮಾಡಿಕೊಂಡರು.








