KODAGU | ಸುಳ್ಯದಲ್ಲಿ ಮತ್ತೆ ಭೂಮಿ ಕಂಪನ
ಕೊಡಗು : ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಸುಳ್ಯ ತಾಲೂಕಿನ ಮತ್ತು ಕೊಡಗಿನಲ್ಲಿ ಭೂಮಿ ಕಂಪಿಸಿದ್ದು, ಜನರು ಭಯ ಭೀತಗೊಂಡಿದ್ದರು.
ಬೆಳಗ್ಗಿ ಏಳು ಗಂಟೆಗೆ 3.4 ಸೆಕೆಂಡುಗಳ ಕಾಲ ಕೊಡಗಿನ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಮತ್ತು ಸುಳ್ಯದ ಸಂಪಾಜೆ , ಗೂನಡ್ಕ, ಗುತ್ತಿಗಾರು ಸೇರಿದಂತೆ ಕೆಲವೆಡೆ ಭೂಕಂಪನ ಅನುಭವವಾಗಿದೆ.

ಅಂದಹಾಗೆ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ 3ನೇ ಬಾರಿಗೆ ಭೂ ಕಂಪಿಸಿದೆ.
ಸುಳ್ಯದಲ್ಲಿ ಎರಡನೇ ಬಾರಿ ಅನುಭವ ಆಗಿದೆ. ಇಂದು ಬೆಳಿಗ್ಗೆ ಭಾಗಮಂಡಲ ಸುತ್ತಮುತ್ತಲಿನ ಭಾಗದಲ್ಲಿ ಭೂಮಿ ಕಂಪಿಸಿದೆ.
ಇದರಿಂದ ಜನರು ಭಯಭೀತಗೊಂಡಿದ್ದು, ಮನೆಗಳಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ.








